ಉರಿಬಿಸಿಲ ಧಗೆಯಲ್ಲಿ ಕುಡಿದು ಬೊಗಸೆ ಕೈ ನೀರ
ಸಂತೆಯ ಮರದಡಿಯ ಆ ಹಾಸು ಕಲ್ಲಿನ ಮೇಲೆ
ಸಿದ್ಧ, ಸೂಪ್ತ ನಿದ್ದೆ ಯ ಸೊಗಸು ದಕ್ಕಿಸಿಹನು ನೇರ;
ಬಾಳು-ಕಾಳಿನ ಸಗಟು ಸಾರಿಗೆಯಲಿ ಎಲ್ಲಿ ನೆಲೆ,
ಯಾ ಗಂಜಿ, ಮುದ್ದೆಯ ತ್ಪಪ್ತಿಯ ಸರಳ ಊಟ,
ನಿರ್ಲಿಪ್ತ ಮನಸಿನ ವಿಹಾರದ ಮೊಜಿನ ಆಟ?
ರಸದಲ್ಲಿನ ಕಸ ಕಾಣುವ ಭೋಗಿಗೆ ಮೈತುಂಬ
ಹೊದ್ದರೂ ಬಿಡದು ಚಳಿ, ಕಳಕಳಿಯ ಒಳಸಂಕಟ
ಯಂತ್ರಗಳ ಗಾಳಿ, ಮಂತ್ರಗಳ ಮಾಧುರ್ಯ ಬಿಂಬ
ಸೆರೆಹಿಡಿಯಲು ಸಾಧ್ಯವೇ ಮನವೆಂಬ ಮರ್ಕಟ..!
ಕತ್ತಲಲ್ಲಿ ಕಣ್ಮುಚ್ಚಿ, ಮಾಡುವ ನಾಳಿನ ಲೆಕ್ಕ, ಇಂದು
ನುಂಗದೇ ಬಿಡುವೊದೇ ನಿದ್ರೆಯ ಶೂನ್ಯ ಬಿಂದು?
ಸಿರಿವಂತ, ಬಲವಂತ, ಸಾಮ್ರಾಟರಿಗೂ, ಭಾರಿ
ಸಾಧನೆಯ ಎಲ್ಲೆಗೆ ಸರಿ-ನೇರ ಮಾರ್ಗವೇ ಮಿತಿ;
ಹುಮ್ಮಸ್ಸಿನ ಮನಕೆ ಪ್ರಜ್ಞೆಯೇ ನಿಜ ದೀಪಧಾರಿ
ಅಳಿವಿನಂಚಿಗೆ ದೂಡುವುದೇ ದುರಾಸೆಯ ಮಿತಿ
ತೃಪ್ತಿಯೊಳು ಸಂತಸ ಓಂದಾಗ ಬಲ್ಲದು ಸದಾ;
ಮೋಹ-ಮುಸುಕಿನ ಗುದ್ದಾಟವು ಕಾಣದು ಹದಾ..!
This poem has not been translated into any other language yet.
I would like to translate this poem