ನಲ್ಲೆ Poem by PRAVEEN KUMAR Kannada Songs

ನಲ್ಲೆ

ಅವಳೆದೆಯ ತೆರೆದು ಕೈತುಂಬ ಹಿಡಿದೆ,
ಹೊರ ಸುರಿದ ಭಾವುಕ ಸಿಹಿ ಜೇನು
ಮೈಕೈ ತುಂಬಿ, ಹರಿದು ಹರಿದು ತಂದಿತು ಮತ್ತು;
ಮಲ್ಲಿಗೆಯ ದೇಹ ಮತ್ತಷ್ಟು ಬೀಗಿ ಕೊಟ್ಟು
ತುಂಬಿದೆದೆ ಮುಂದಿಟ್ಟಳು ಮೈಮರೆತು;
ತಾಮ್ರದ ಮೈಮೇಲೆ ವಿದ್ಯುತ್ ಅಲೆಗಳ ಚಕ್ರ
ಸುತ್ತಿ ಸುತ್ತಿ ಕಾಸಿತು ಕೆಂಪು, ಅವಳೆದೆಯ ಮೈಮಾಟ:
ಕಣ್ಣುಗಳ ಬಿಳಿಮಿಂಚು, ಮತ್ತು ಹಿಡಿಸುವ ಸೆಳೆತ
ಉಕ್ಕೇರಿ ಮುಳುಗಿಸಿತು ನನ್ನ ಸ್ಥೈರ್ಯ, ಧೈರ್ಯ.

ಮೈಬಿಚ್ಚಿ ಕೊಟ್ಟು, ಮೌನ ಸಮ್ಮತಿ ಮಿಂಚಿ,
ಅನುಷಂಗದಾಸೆ ಮುಖತುಂಬ ಹೊತ್ತು
ಹೂವು ಆಹ್ವಾನ ಚೆಲ್ಲಿ, ಸುಖ ಮೊಲ್ಲೆ ಕೊಟ್ಟು,
ಅತೃಪತ ಕಡಲಿನಡಿ ಮತ್ತೆ ಕಾದಿರುವಳು ನಲ್ಲೆ;
ವಿದ್ಯುಲ್ಲತೆ ಹಬ್ಬಿ, ಹಿತ ನಡುಕದಲಿ ಬೆವತು,
ದೇಹದಾಹ ಅಗಮ್ಯ ಭಾವತೀವ್ರತೆ ಬೆರೆತು,
ಮತ್ತೆ ಮತ್ತೆ ಮೆತ್ತೆ ಕೈತುಂಬ ತುಂಬಿ,
ನಲ್ಲೆಯನೇನೆಂದು ಕಂಡೆ, ಅನುಭವಿಸಿ ಕೊಂಡೆ.

Tuesday, April 26, 2016
Topic(s) of this poem: life,love
COMMENTS OF THE POEM
READ THIS POEM IN OTHER LANGUAGES
Close
Error Success