ನಿನ್ನ ನೆನೆದಾಕ್ಷಣ ನನ್ನ...... Poem by PRAVEEN KUMAR Kannada Songs

ನಿನ್ನ ನೆನೆದಾಕ್ಷಣ ನನ್ನ......

ನೀನೆಲ್ಲಿರಲಿ, ನಿನ್ನ ನೆನೆದಾಕ್ಷಣ ನನ್ನ
ಮನದಲ್ಲೇನೋ ವಿಲಕ್ಷಣ ನೋವು, ತವಕ,
ಏನೋ ಕಳೆದ ಬರಿದು ಅನುಭವ, ಚಿನ್ನ,
ಏನೋ ನನ್ನದು ನನ್ನಿಂದ ಕಳಚಿದ ಮರುಕ.

ಏನೋ ಆಶೆ, ನಿರಾಶೆ, ಸಂಕಟ, ಹೋರಾಟ
ಮನಸ್ಸೆಲ್ಲ ವಿಚಿತ್ರ ಅವಿರತ ಆತಂಕ ಹಾರಾಟ;
ವರ್ತಮಾನದ ಬೇಲಿಯ ಬಗೆದು ಸಿಗಿದು
ಹೊಸಲೋಕವ ಕೂಡಿ ಬೆಸೆವ ಬಯಕೆ.

ಎಂದೆಂದೂ ಒಂದಾಗಿರಬೇಕಾಗಿದ್ದ ನಾವು
ಎರಡಾಗಿ ಬಗೆದು ನಿಂತ ಬಗೆ ಹೇಗೆ?
ನಮ್ಮಿಬ್ಬರ ನಡುವಿನ ಈ ಬಗೆಯ ಕಂದಕ
ಕಾಲಗರ್ಭವ ಬಗೆದು ನಿಂತಿದುದು ಹೇಗೆ?

ಒಳಗಿಂದ ಭಗಿಲೆದ್ದು ನಿನ್ನ ಸೇರುವ ತವಕ,
ಏರಿಳಿತ ಮುಳ್ಳುಕಳ್ಳಿಗಳೇನೇ ಇರಲಿ ಮಧ್ಯೆ,
ದಿಟ್ಟ ಹೆಜ್ಜೆಗಳನ್ನಿಟ್ಟು ನಿನ್ನ ಸೇರುವ ಬಯಕೆ,
ಮತ್ತೆಂದೂ ಬೇರ್ಪಡದಂತೆ ಬಿಗಿದಪ್ಪುವಾಸೆ.

ದೀಪಬೆಳಕುಗಳೊಂದಾಗಿದ್ದರೆನೆ ಚಂದ,
ಹೂವು ಸುವಾಸನೆ ಬೇರ್ಪಡದಿದ್ದರೆನೆ ಚಂದ,
ನವರಸ ಸಂಗೀತಗಳು ಕೂಡಿದ್ದರೆನೆ ಚಂದ,
ನೀನು ನಾನು ನನ್ನನಿನ್ನಲ್ಲಿದ್ದರೆನೆ ನನ್ನನಿನ್ನ ಚಂದ.

ನೀನುನಾನು ನಮ್ಮ ಮನಮನೆ ದೀಪಹಚ್ಚುವವರೆಗೆ
ಕಣ್ಣುಹಾುಸಿದತ್ತಲ್ಲೆಲ್ಲ ಬರಿ ಕತ್ತಲು ನನಗೆ,
ನಿನ್ನನನ್ನ ಭರವಸೆಯ ಬೆಳಕಿನ ಗತಿ ಹಿಡಿದು
ದೂರದಸ್ಪಷ್ಟ ಗುರಿಯತ್ತ ದಿನ ದೂಡುತ್ತಿರುವೆ.

Tuesday, April 26, 2016
Topic(s) of this poem: love
COMMENTS OF THE POEM
READ THIS POEM IN OTHER LANGUAGES
Close
Error Success