ಅನನ್ಯ ಭಾವ Poem by PRAVEEN KUMAR Kannada Songs

ಅನನ್ಯ ಭಾವ

ನೀನು ನನ್ನೊಳಗಿನ ಚೈತನ್ಯ ನಂದಾದೀಪ,
ಮನದಾಳದಲಿ ನೆಲೆಸಿದ ಭಾವರಾಗ ಪ್ರತೀಕ,
ಭಯ ಭಕ್ತಿ ಮಿಡಿಯುವ ಹಾರ್ದಪೂಜೆ;
ನೀನು ನನ್ನೊಳಗಿನ ಆಶೋತ್ತರಗಳ ಪುಂಜ,
ಜೀವನಯಾನದ ಉದ್ದ ದಾರಿತೋರುವ ಪಂಜು,
ಮುನ್ನಡೆ ಸಾಧನೆಯಲ್ಲಿ ಕೊಟ್ಟಕೊನೆಯ ಲಕ್ಷ್ಯ.

ನಿನ್ನ ಬಳಿಯಲಿ ನಾನು ಗಾಳಿಯಲಿ ತೇಲುವೆನು,
ನಿನ್ನೆ-ನಾಳೆಯ ಮರೆತು ನಿನ್ನೊಳಗೆ ಬೆರೆಯುವೆನು,
ನಿನ್ನ ಬಳಿಯಲಿ ನಾನು ಅನನ್ಯಭಾವಕ್ಕೇರಿ
ಅದ್ವೈತರಾಗದಿ ನಿನ್ನ ನನ್ನಾತ್ಮದಲಿ ತುಂಬಿ
ಅನವರತ ನಿನ್ನ ಜೊತೆ ಬಾಳಪಥ ನಡೆಯುವೆನು.

Tuesday, April 26, 2016
Topic(s) of this poem: love
COMMENTS OF THE POEM
READ THIS POEM IN OTHER LANGUAGES
Close
Error Success