ದಾರಿ ನಾವು ನಡೆದ ಹಾಗೆ
ನಮ್ಮ ದಾರಿ ಕೂಡಿ ಬರಲಿ,
ಮುಗಿಲಿನಾಚೆ ಕೂತು ನೀನು
ಹೊಟ್ಟೆ ಕಟ್ಟಿ, ಬೆವರು ಸುರಿಸಿ
ಕಾಲುಗಂಟು ಭಾರವನ್ನು
ಹೆಗಲಿನಲ್ಲಿ ಹೇರಿಕೊಂಡು
ಬಿದ್ದುಯೆದ್ದು ಹೊರೆಯ ಕೆಳಗೆ
ಎರಡು ಕಾಲನ್ನೆಳೆದುಕೊಂಡು
ಮುಂದೆ ಮುಂದೆ ನಡೆವುದನ್ನು
ದಿಗಂತದಂಚಿನಲ್ಲಿ ಕಂಡು
ಕೈಲಾಗದವನಂತೆ ನಾನು
ಕುಕ್ಕರಿಸಿ ಕೂರಬೇಕೆ?
ಸಾಗರ ನೀರರಾಶಿ
ಮಧ್ಯೆ ಒಂಟಿ ಜೀವದಂತೆ
ದಿಕ್ಕು ಮರೆತು ಕಂಗಾಲಾಗಿ
ನಡೆವ ಒಂದೆ ಗುರೆಯನಿಟ್ಟು
ನಿನ್ನ ಜೊತೆ ಸೇರುವುದೆಂದು
ಕಾಲು ನೆಲ ಸೇರಿದಲ್ಲಿ
ಪುಟ್ಟ ಪುಟ್ಟ ಹೆಜ್ಜೆುಕ್ಕಿ,
ನಡೆಯುತ್ತಿರುವೆ ನಾನು ನೋಡು;
ಹಿಂದೆ ಮುಂದೆ, ಎಡ ಬಲ,
ನನಗೆ ಅದರ ಪರಮೆಲ್ಲ,
ಹೆಜ್ಜೆಯಲ್ಲೆ ಹೆಜ್ಜೆುಡುವ
ಏಕತಾನ ಭಾದಿಸುವುದಿಲ್ಲ.
ಕಾಲಸ್ಥಳದ ಸುಳುಪಿನಲ್ಲಿ
ಬಿದ್ದ ನಾವು ಬುಗರಿಯಂತೆ
ತಿರುಗಿ ತಿರುಗಿ ಸೇರಬೇಕು;
ಮತ್ತೆ ಬೇರ್ಪಡಲೆ ಬೇಕು;
ಈ ನಡುವೆ ಸೂತ್ರ ಮರೆತ ನಾವು
ತಡೆರಹಿತ ಚಲನೆಯಲ್ಲಿ
ನಿನ್ನ ನನ್ನ ಮರೆಯಬೇಕು;
ಮರೆಯಲೆಂದೆ ಚಲಿಸಬೇಕು;
ಹೂವು ಮಕರಂದದಂತೆ
ನಾವು ನಮ್ಮ ದೂರದಾಶೆ
ಸಾಂಭವ್ಯ ಭೃಂಗಕ್ಕಾಗಿ ಕಾದು
ಚಡಪಡಿಸುವದೆ ಬಾಳು;
ರಂಗು, ಸಂಗೀತ, ಸೌಗಂಧ, ಸ್ವಾದ
ನಮ್ಮ ಮಧ್ಯೆ ಎಲ್ಲೊ ಅಡಗಿ
ಭೃಂಗರಾಶಿ ದೂರ ಹಾರಿ
ನಮ್ಮನಿಲ್ಲಿ ಮರೆುತೇಕೆ?
ಎಷ್ಟು ಯುಗಗಳೀ ನೀರಸತೆ ನಮಗೆ?
ಎಷ್ಟು ದೂರ ಬಂಧನದ ಓಟ?
ಮನಸು ಮನಸು ಅಮೂರ್ತವಾಗಿ
ಎದುರು ಬದುರು ಕೂತ ನಮಗೆ
ಕಾಲಚಕ್ರದ ಹೊರೆುದೇಕೆ?
ಸಾಂಭವ್ಯ ಭೃಂಗದ ಚಡಪಡಿಕೆಯೇಕೆ?
ಬಾರೆ, ನಾವು ಎಲ್ಲ ಮೀರಿ,
ಮನಸು ಕಡಲ ತೆರೆಗಳೇರಿ
ನಮ್ಮ ಒಂದೆ ಲೋಕದಲ್ಲಿ
ಕಾಲ ಸ್ಥಳದ ಗೋಡೆ ಒಡೆದು
ಸ್ವಚ್ಛಂದವಾಗಿ ಹಾರುವ.
This poem has not been translated into any other language yet.
I would like to translate this poem