ಸಾಧನೆ Poem by PRAVEEN KUMAR Kannada Songs

ಸಾಧನೆ

ಬಿಡದ ಯತ್ನದಿ ಕಡಲಿನ ನಡುಗುಡ್ಡೆಯನ್ನೆತ್ತುವರು,
ಮರಳು ಕಾಡಿನ ಮೇಲೆ ಹಡಗು ನಡೆಸುವರು;
ಬಿಡದ ಯತ್ನದ ಬಲೆಗೆ ಬೀಳದ ದಿವ್ಯ ದ್ರವ್ಯಗಳಿಲ್ಲ,
ಸಾಧನೆಯ ಪಂಜರದಿ ಹೊರಹಾರಿದ ಹುಲಿ ಹಕ್ಕಿಗಳಿಲ್ಲ;
ಏಕಚಿತ್ರದಿ ಬುದ್ಧಿ ಬೆವರು ಬೆರೆಸಿದರೆ ಭುವಿ ಕೈ ಸೇರುವುದು,
ಅಷ್ಟದಿಕ್ಕುಗಳಿಂದ ಅಪರಂಜಿ ಬಯಕೆ ಭಾಗ್ಯ ಅಂಗೈ ಸೇರುವುವು;
ಸೋಲನೊಪ್ಪದ ಜೀವಕ್ಕೆ ಸೋಲು ಸಲ್ಲಿಸುವ ಕನಸು ನಿಜವಾದುದುಂಟೆ?
ಸಾಧನೆಯ ಹಠಮಾರ್ಗದ ಮಧ್ಯೆ ನಿಲ್ಲಬಲ್ಲ ಅಡ್ಡಗೋಡೆಗಳುಂಟೆ?
ಬಿಡದ ಯತ್ನದ ಬೆಂಕಿಯಲಿ ಬೆಂದು ಬಗಲಿಗೇರದುದು ಉಂಟೆ?
ನೀನೊಬ್ಬಳೇಕೆನ್ನ ಹಟಯತ್ನದ ಪರಿಧಿಗೆ ಬಾಹಿರಳಾಗಿ ನಿಂತೆ?
ನೀನೇಕೆ ನನ್ನಭಿಲಾಶೆ, ಧ್ಯಾನ ಸಂವೇದನೆಗೆ ಪರಕೀಯಳಾದೆ?

ಗಾಳಿದಿಂಬಿನ ಮೇಲೆ ಲೋಹದ ಮನೆ ತೇಲಿಸುವ ಜನರಿರುವಲ್ಲಿ,
ಪರದೇಶ ದೃಶ್ಯಗಳ ತಕ್ಷಣ ಪರದೆ ಮೇಲೆ ತರುವ ಹಠಗೆದ್ದಲ್ಲಿ,
ಪ್ರತಿ ಮಾನವರನ್ನು ವಿಧವಿಧ ಮೂಢಿಸಿ ಕೈಗತಗೊಳಿಸಿದಲ್ಲಿ,
ನಾನೇಕೆ ಸೋತೆ ಸಾಧನೆಯ ಮುಗಿಯದ ಮಾರ್ಗದ ಮಧ್ಯೆ?
ನಾನೇಕೆ ಕತ್ತಲೆ ಕಂಡೆ ನಿನ್ನ ಬೆಳಕನ್ನರಸುವ ಸಾಧನೆಯಲ್ಲಿ?
ದಾರಿ ತಪ್ಪಿದೆ, ಚಿತ್ತಕಲಕಿದೆ, ಹಿಡಿದ ಹಠದ ಕಾವು ಸಾಕಾಗದಾಗಿದೆ,
ದಾರಿ ದೂರವಿದೆ, ನಡೆಯುವುದು ಬಹಳವಿದೆ, ಗುರಿುತಿ ಕಷ್ಟವಿದೆ;
ನಿನ್ನ ತಲಪುವ ಹುಚ್ಚು ಮನಸು ಹೃದಯದ ತುಂಬ ನಿಂತಿದೆ,
ಸೋತೆನೋ ಗೊತ್ತಿಲ್ಲ, ಗೆದ್ದೆನೋ ತಿಳಿದಿಲ್ಲ, ಹಿಡಿದ ಗುರಿಯೊಂದೆ ಗೊತ್ತು;
ದಿಗಂತದ ಸುತ್ತ ದಪ್ಪ ಕತ್ತಲು, ಬೆಳಕಿನ ಕಿರಣ ತೂರಿ ಬರದಷ್ಟು,
ಕುರುಡು ಕಣ್ಣನು ಹೊತ್ತು, ಮುಂಗೈ ಚಾಚಿ ಪರದಾಡಿ ನಡೆಯುವೆನು,
ಇಂದಲ್ಲ ನಾಳೆ, ಕತ್ತಲತೂರಿ ಬಂದು ಮೈತೋರುವೆಯೆಂದು.

ಯಾವ ಲೋಕದ, ಯಾವ ಮೂಲೆಯ ಸೇರಿ ನಮ್ಮನು ಮರೆತೆಯೇ,
ಯಾವ ಕತ್ತಲ ರೌದ್ರ ರಂಧ್ರವು ನಮ್ಮ ಮಧ್ಯೆ ನಿಂತಿರುವುದೊ,
ಯಾವ ದಿಕ್ಕಲಿ ಯಾವ ದಾರಿಯ ಹಿಡಿದು ನಿನ್ನನ್ನು ತಲಪಲಿ?
ಬಿಡದ ಯತ್ನದ ರೊಚ್ಚಿನಿಂದ, ಗುರಿಯ ತಲಪುವ ಕೆಚ್ಚಿನಿಂದ
ತಿಳಿಯದಾಶೆ ಕೈಯ ಹಿಡಿದು ಹಠದ ಮಾರ್ಗದಿ ನಡೆಸಲು,
ಸೋತು ಗೆದ್ದು, ಗೆದ್ದುಸೋತು, ಗುರುಯನ್ನರಿಯದೆ ನಡೆಯುವೆ;
ನನ್ನ ಸಾಧನೆ ನಿನ್ನ ದೂರಕೆ ಕಾವು ಸಂವೇದನೆ ತರುವುದೆಂದು,
ಚಿತ್ತ ಕಲಕಿ, ಸತ್ಯವರಿತು ಅರ್ಧದಾರಿ ನೀ ಬರುವೆಯೆಂದು,
ಮಂಜು ಮನೆಯಲಿ ದೀಪುಟ್ಟು ಸದಾ ನಿನ್ನನ್ನು ಕಾಯುವೆ;
ನೀರಿನಿಂದ ವಿದ್ಯುತ್ತು ತಂದ, ಎಣ್ಣೆುಂದ ಚಲನೆ ತಂದ,
ತಂತಿುಂದ ಕೃತಕಗಣಿತ ತಂದ ಸಾಧನೆ ಲೋಕದಲ್ಲಿ
ಹೇಗೆ ನೀನು ನನ್ನ ಧ್ಯಾನ ಸಂವೇದನೆಗೆ ಹೊರಗೆ ಸಾಧ್ಯ?

Wednesday, April 27, 2016
Topic(s) of this poem: love
COMMENTS OF THE POEM
READ THIS POEM IN OTHER LANGUAGES
Close
Error Success