ಮಿಂಚು ಬೆಳಕನ್ನೇರಿ ಸುಳಿಗಾಳಿ ತಂದವಳು
ಮರುಭೂಮಿ ಮರೆಯಲ್ಲಿ ಚಿಗುರೆಲೆ ಚಿಗುರಿದಳು,
ಸುಡುಗಾಡು ನಡುವಲ್ಲಿ ಬದುಕುವಾಸೆ ಹಬ್ಬಿದಳು;
ದಿಗಂತ ಮರೆುಂದ ಕನಸ ಹೊತ್ತು ತಂದವಳು
ಬೆಚ್ಚನೆಯ ತಂಪಿನಲಿ ಮೈಮನಕೆ ಕಾಪಿಟ್ಟು
ನಾನೆಚ್ಚರಗೊಂಡಾಗ, ದಿಗಂತವನೇರಿ ದಾಟಿದಳು.
ಚಿಗುರು ಹಸಿರಾಗಿ, ಹೂವು ಹಣ್ಣಾಗಿ ಫಲ ತುಂಬಿ ನಿಂತಾಗ,
ಬದುಕಿನಾಸೆ ಹೆಮ್ಮರವಾಗಿ, ಜೀವ ಬಣ್ಣ ತಳೆದಾಗ,
ಯಾವ ಮಾಯೆಯ ಮೋಡಿಯೋ, ಬಂದಂತೆ ಬೀಸಿ ಸಾಗಿದಳು;
ಸುಡುಗಾಡನು ಬಿಟ್ಟು, ಕತ್ತಲನಿಟ್ಟು ಹೊರ ಹಾರಿದಳು,
ಮತ್ತೆಲ್ಲ ಪುನ: ಸ್ತಬ್ಧ, ನಿರ್ವಾತ, ಬರಿ ಬಯಲು,
ಪ್ರೇತಗಳಾವಾಸ, ಮಿಥ್ಯಮರೀಚಿಕೆ, ನಿರಾಶೆಗಳ ಸುಡುಗಾಡು.
This poem has not been translated into any other language yet.
I would like to translate this poem