ಎಲ್ಲೆಲ್ಲೂ ನೀನೆ, ಕಣ್ಣಾಡಿಸಿದಲ್ಲಿ ನೀನೆ,
ಎತ್ತರದ ಬೆಟ್ಟದಲ್ಲಿ, ಬಾುಬಿಟ್ಟ ಕಂದರದಲ್ಲಿ,
ಹರೆಯದ ಹೂವಿನಲ್ಲಿ, ಒಣ ತರಗೆಲೆಯಲ್ಲಿ,
ಸನಿಹದಲ್ಲಿ, ದೂರ ದಿಗಂತದ ಮರೆಯಲ್ಲಿ,
ಹುಣ್ಣಿಮೆ ಚಂದಿರನಲ್ಲಿ, ಸುಡುಸುಡು ಬಿಸಿಲಿನಲ್ಲಿ,
ಪಾದತಳದಲ್ಲಿ, ತಲೆ ಮೇಲಿನ ನೆಲೆಯಲ್ಲಿ,
ಮಳೆಯಲ್ಲಿ, ಹೊಳೆಯಲ್ಲಿ, ಮರುಭೂಮಿ ಮರಳಿನಲ್ಲಿ,
ಮುಗಿಲಲ್ಲಿ, ಗಿಡಗಂಟಿ ಮರೆಯಲ್ಲಿ, ಅಲ್ಲಲ್ಲಿ, ಇಲ್ಲಿ,
ಎಲ್ಲೆಲ್ಲೂ ನೀನೆ, ಕಣ್ಣಾಡಿಸಿದಲ್ಲಿ ನೀನೆ.
ನಿನ್ನ ನಗು ಮಿಂಚಾಗಿ, ಮೈಮನಕೆ ಬೆಳಕಾಗೆ,
ಭಾವುಕತೆ ಬೆರಗಾಗಿ, ಆತುರದ ಮರವಾಗೆ,
ಪ್ರತಕ್ಷಣವು ನಿನ್ನ ಬಳಿ ಬರಲೆಂದು ನೆಲಕ್ಕಿಳಿವೆ,
ಮುಚ್ಚಿದ್ದ ಕದತೆರೆದು, ಕತ್ತಲೆಗೆ ಕೈಚಾಚಿ,
ಬಿಗಿದಪ್ಪಿ ನೀನೆಂದು ಮುತ್ತುಗಳನ್ನಿಡುವೆ.
ಕೈಸೆರೆಯ ಮರೆಯಲ್ಲಿ ಮೈಮರೆತ ಹೆಣ್ಣೊಂದು
ಪ್ರತಿಪ್ರೀತಿ ಕರೆದಾಗ, ಪ್ರತ್ಯಕ್ಷ ತಿಳಿದಾಗ,
ಕನಸಿನೆತ್ತರದಿಂದ ನೆಲವಪ್ಪಿ ಮುನ್ನಡೆವೆ.
This poem has not been translated into any other language yet.
I would like to translate this poem