ಋತು ರಾಣಿ Poem by PRAVEEN KUMAR Kannada Songs

ಋತು ರಾಣಿ

ಋತು ರಾಣಿ, ರಸತಪ್ತೆ, ವೈಯಾರಿ, ವ್ಯಾಲೋಲೆ,
ನಿನ್ನನಡೆ ನೃತ್ಯದಲಿ ಕಾಲಗತಿ ಕಾಣುವುವು;
ಪ್ರಕೃತಿಯೆ, ಚಂಚಲೆ, ನವಭಾವ ರಸಮಾಲೆ,
ನಿನ್ನ ನಡೆನುಡಿಯಲ್ಲಿ ಬಣ್ಣಗಳುರುಳುವುವು;
ನಿಯತ ನಿಯಮದ ಬಾಲೆ, ಕಾಲನರಗಿಣಿ, ಲೋಲೆ,
ನಿನ್ನ ಮನದೇರಿಳಿತ, ಋತುಚಕ್ರ, ಮನೋಭಾವ
ಆಕಾಶಗಾಳಿಯಲಿ, ಗಿಡಗಂಟಿ ಹೂವಿನಲಿ, ಪ್ರಾಣಿಗಳಾತ್ಮದಲಿ
ನವನವೋನ್ಮೇಷ ಚೈತನ್ಯ ಚಿಮ್ಮುವುವು;
ಹೊಸಲೋಕ, ಹೊಸಭಾವ, ಹೊಸರೀತಿ, ಹೊಸಗೀತೆ
ಸಂಗೀತವಾಗಿ ಮೈಮನವ ಮೀಟುವುವು;
ನೇಸರ ಬಣ್ಣ ಬದಲಾಗಿ, ಆಕಾಶ ಬದಲಾಗಿ
ನಿನ್ನೊಡನಾಟದಲಿ ವೈವಿಧ್ಯ ಮರುಕಳಿಸುವುವು.

Wednesday, April 27, 2016
Topic(s) of this poem: love
COMMENTS OF THE POEM
READ THIS POEM IN OTHER LANGUAGES
Close
Error Success