ಆಕಾಶದ ಕಿಂಡಿಗಳಿಂದ ತೂರಿ ಹಬ್ಬಿ ಬಂದೆನ್ನ ಹರಸು Poem by Praveen Kumar in Bhavana

ಆಕಾಶದ ಕಿಂಡಿಗಳಿಂದ ತೂರಿ ಹಬ್ಬಿ ಬಂದೆನ್ನ ಹರಸು

ಅಖಿಲಾಂಡ, ಬ್ರಹ್ಮಾಂಡವನ್ನೆಲ್ಲ ಬೆಳಗಿಸುವ ಬೆಳಕೆ,
ಬಂದೆನ್ನ ಬುದ್ಧಿ ಹೃದಯಕ್ಕೆ, ಹಿತ ಬೆಳಕು ನೀಡು;
ಕತ್ತಲಡರಿದ ಶೂನ್ಯಾಕಾಶದ ಜೀವಾಧಾರ ಬೆಳಕೆ,
ನನ್ನೊಳಗೆ ಹಬ್ಬಿದ ಕತ್ತಲೆಗಂತಿಮ ತೆರೆ ಇಳಿಸು.

ಸೂರ್ಯ ನಕ್ಷತ್ರ ಆಕಾಶಗಂಗೆಗಳ ಹೊರಗಿನಿಂದ ಹೊರಟು
ದಯೆ ವಿನಯ ಪ್ರೀತಿ ಸಹಾನುಭೂತಿಗಳ ಶುಭ್ರ ಹೊರೆಯನ್ನು ಹೊತ್ತು
ಕೋಟೆ ಕೋಟೆ ಬೆಳಕುವರ್ಷಗಳ ಜ್ಞಾನನುಭವವ ದಾಟಿ ಬಂದು
ಕಾಲ ಪುರಷ ರೂಪಿಯಾಗಿ ನನ್ನಲ್ಲಿ ತಿಳುವಳಿಕೆಯ ಬೀಜ ಬಿತ್ತು.

ಶೈತ್ಯಮಯ ಬ್ರಹ್ಮಾಂಡಕ್ಕೆ, ಜೀವದ ಕಾವು ಕೊಡುವ ಬೆಳಕೆ,
ನಿಸ್ಸಾರತೆಯ ನೀರವತೆಯಲ್ಲಿ ಹುದುಗಿ, ಮರಗಟ್ಟಿದ ಜೀವಕ್ಕೆ,
ಹೊಸ ಜೀವದ, ಹೊಸ ಹರ್ಷ, ಹುರುಪಿನ, ಹೊಸ ಮೊಳಕೆಯೊಡೆಸು,
ಹೊಸ ಶಕ್ತಿ, ಹೊಸ ಭಾವಾನುಭಾವದ, ನಿಷ್ಠೆ, ತತ್ಫರತೆ ಹರಿಸು.

ಆಕಾಶ ಕಿಂಡಿಗಳಿಂದ, ತೂರಿ, ಹಬ್ಬಿ, ಬಂದೆನ್ನ ಹರಸು,
ಭಯ, ವಿಪ್ವಲತೆಗಳ, ನನ್ನಿಂದ ಬಲು ದೂರ ಹರಸು;
ನೇರ ಮಾರ್ಗದಿ ಬೇಗ, ನುಗ್ಗಿ, ನನ್ನೊಳಗೆ ಬಂದು ಸೇರು,
ಧೈರ್ಯ, ಸ್ಥೈರ್ಯದ, ಎಂಟೆದೆಯೇನೆಂದು ಪ್ರತ್ಯಕ್ಷ ತೋರು.

ಜ್ಞಾನ ಧೈರ್ಯದ, ಶಕ್ತ ಕಿರಣಗಳ ರೂಪದಿಂದ ಬಾ,
ಗ್ರಹ್ಯ ಲೋಕಕ್ಕೆ, ಹೊಸ ಅರ್ಥಗಳ ರೂಪಾಂತರ ತಾ;
ಪಳೆಯುಳಿಕೆಗಳ ನಿರ್ಜೀವತೆಯಿಂದ, ಸಿಡಿದೆದ್ದು ಬಂದು,
ಕಂಡು, ಕೇಳುವ, ಲೋಕಕ್ಕೆ, ಸಜೀವತೆಯ ಚಲುವು ತಾ.

ಹಿತಹಿತಗಳ ನೇರ ಸ್ಪಷ್ಟ ನೋಡುವ ಹರಿತ ದ್ಟೃ,
ಸುತ್ತುಮುತ್ತಲು ನೋಡಿ ಹಿತಮಿತದಿ ನಡೆಯುವ ಪ್ಟು,
ಹೃದಯದಾಳದಲಿ ಕರುಣೆ ಪ್ರೀತಿಯ ನಿರಾಳ ವ್ಟೃಷ್ಠಿ.
ಬೆಳಕೆ, ನೀ ಕೊಟ್ಟರೆನೆ ನನಗೆ ಹೊಸ ಜೀವನದ ಸ್ಠೃಷ್ಠಿ.

ಕಗ್ಗತ್ತಲ ಮೇಲೆ, ಜ್ಞಾನ ಬೆಳಕಿನ ಕಿರಣಗಳ ಚೆಲ್ಲಿ,
ಕಲ್ಪಾಂತರಗಳ, ದಟ್ಟ ಅಜ್ಞಾನದ ಪದರು ತೊಲಗಿಸುತ್ತ ಬಾ;
ಕಾಲಲೋಕಗಳ ತೆರೆ ಬಿಚ್ಚಿ, ಸುಪ್ತಪಜ್ಞೆಯ ಹೊರ ಚೆಲ್ಲಿ,
ಜ್ಞಾನ ಪ್ರಜ್ಞೆಯ ಕಾಡ್ಗಿಚ್ಚಲ್ಲಿ, ಸಕಲ ದೋಶ ಮುಕ್ತಗೊಳಿಸಲು ಬಾ.

ಸಾವಿರ ಬಣ್ಣಗಳ, ಸುಂದರ ಸಂಯೋಜನೆಯ, ಶುಭ್ರ ಬೆಳಕೆ,
ಸಾವಿರ ಬಣ್ಣ ಭಾವಗಳನೊಂದಾಗಿ ಹೆಣೆದು, ಲೋಕ ಬಿಚ್ಚಿ ತೋರು;
ಜ್ವಲಂತ ಬೆಳಕಿನ, ಶುಭ್ರ ಮಾರ್ಗದ ಸತ್ಯ ನಡೆಯ ಸ್ಥೈರ್ಯ,
ಒಳಗೊಳಗೆ ತುಂಬುವ ಸತ್ತ್ವವೇನೆಂದು ನನಗೆ ತೋರು.

Friday, April 29, 2016
Topic(s) of this poem: life
COMMENTS OF THE POEM
READ THIS POEM IN OTHER LANGUAGES
Close
Error Success