ಬೆರ್ಚಪ್ಪಗಳ ಮುದ್ರೆ Poem by Praveen Kumar in Bhavana

ಬೆರ್ಚಪ್ಪಗಳ ಮುದ್ರೆ

ದಪ್ಪ ತೊಗಲಿನ ಎಮ್ಮೆ, ನಮ್ಮ ಸರಕಾರ,
ಹೊಡೆದರೂ, ಬಡೆದರೂ, ಎದ್ದೇಳದಂತಹ ಭಾರ;
ದೂಡಿದರೂ, ನೂಕಿದರೂ, ಬಿಡದ ಹೊಲಸಿನ ನಂಟು,
ಮುಟ್ಟಿದರೆ, ಕೈ ಹತ್ತುವ, ಮೈ ತುಂಬ ಅಂಟು;
ಬೇಕೋ, ಬೇಡವೋ, ಎಂಬ ಮಂದ ನಡಿಗೆ,
ನೇರ ನಡಿಗೆಯೋ, ಬಡಿಗೆ ಹಿಡಿದಿರುವ ವರೆಗೆ;
ಇಲ್ಲವಾದರೆ ಸ್ಥಾಯಿ, ಮೊಂಡು, ಒದೆದು ಬಿಡುವವರೆಗೆ,
ಇದು ದಪ್ಪ ತೊಗಲಿನ ಎಮ್ಮೆ, ನಮ್ಮ ಸರಕಾರ.

ಎದುರಲ್ಲಿ ಬಂದವರನ್ನು ಹಾಯುವುದು, ನೂಕುವುದು;
ಕಾಲುಗಳೆಡೆುಂದ, ಮೊಲೆ ಹಿಂಡುವ ಕಳ್ಳ ಜಾರರಿಗೆ,
ದಪ್ಪ ಹಾಲಿನ ಹೊಳೆ ಹರಿಸುವ ಎಮ್ಮೆ, ಈ ಸರಕಾರ;
ಜನ ಸಾಮಾನ್ಯರಿಗಲ್ಲ, ಇದು ಲಾಭಕೋರ ದಳ್ಳಾಳಿಗಳಿಗೆ,
ಹುಟ್ಟಲು, ಬದುಕಲು ಮಾಡಿಟ್ಟ ಭಂಡ ಸರಕಾರ;
ಎಡದಲ್ಲಿ, ಲಂಚದ ಹುಲ್ಲು, ಬಲದಲ್ಲಿ, ನೇಣಿನ ಕೊಂಡಿ,
ಹಿಡಿದು ಬಂದರೆ ಮಾತ್ರ, ಈ ಎಮ್ಮೆಯ ಹರಿ ಹಾಯ್ದಾಟ,
ಹಾರುವುದು, ಕುಣಿಯುವುದು, ಮತ್ತೆ ಬೇಕೆಂದಲ್ಲಿ ನೆಗೆಯುವುದು.

ಹಂಡೆಯಷ್ಟು ದೊಡ್ಡ ಹೊಟ್ಟೆ ಹೊತ್ತ ಸರಕಾರ,
ಕಣ್ಣಿಟ್ಟಲ್ಲಿ, ಹುಲ್ಲುಗಾವಲು ಬಂಜರಾಗುವುದು ಶತ: ಸಿದ್ಧ:
ಇದರ ಗಟ್ಟಿ ಹಾಲು, ಕೈಯಲ್ಲಿದ್ದವರಿಗೆ ಮಾತ್ರ ಸಿದ್ಧ,
ಏನಿಲ್ಲದವರು, ಬೇಡುವುದು ಗುಡ್ಡಕ್ಕೆ ಮಣ್ಣುಹೊತ್ತಂತೆ;
ಇದು ಧರ್ಮಾಧಿಕಾರಿ, ಯಮನ ವಾಹನದ ಸಂಬಂಧಿ,
ಅದರಿಂದಲೋ ಏನೋ, ಧವರ್iಕಾನೂನುಗಳ ಬಗ್ಗೆ ಇಷ್ಟು ತಾತ್ಸರ;
ಕಾಂiÀರ್i ಕಾರಣಕ್ಕೆ ಹೊರಗು, ಈ ಜನರನ್ನಾಳುವ ಬುರುಗು,
ಇಲ್ಲಿ, ನಡೆಸಿದ್ದೆ ರಾಜ್ಯಭಾರ, ಕೊಳ್ಳೆ ಹೊಡೆಯುವುದೆ, ಸರಕಾರ.

ಇಲ್ಲಿ ಹಾಲು ಕುಡಿಯುವವರೆ ಸವಾರರು;
ಎಮ್ಮೆ ಹಾಲಿನ ಗುಣವೊ, ಎಮ್ಮೆ ಬೆನ್ನಿನ ಮಹತ್ತೋ,
ಅಂತೂ ದಪ್ಪ, ಮಂದ ಗುಣ, ಬುದ್ಧಿ, ಕೆಲಸ ಗತ್ತು;
ಮಂದತೆಯಲ್ಲೂ ಏನೋ ಮದ, ಟೊಳ್ಳು ಠೀವಿ, ಠೇಂಕಾರ,
ಪೀಠದಿಂದ ಪೀಠಕ್ಕೆ, ಕಾಲಕಾಲಕ್ಕೆ, ಹಾತೆಯಂತೆ ಹಾರಾಟ;
ಹೊಣೆಗೇಡಿ ಕೆಲಸ, ಅದರ ಮೇಲೆ, ಈ ಬೆರ್ಚಪ್ಪಗಳ ಮುದ್ರೆ;
ಈ ಬೆರ್ಚಪ್ಪಗಳ ಮುದ್ರೆಯಿಂದ ನಡೆಯುವುದು, ಲೋಕಲೋಕದ ವ್ಯವಹಾರ,
ಜೀವನ್ಮರಣದ ವ್ಯತ್ಯಾಸ, ಜನ್ಮಜನ್ಮಗಳ ಸಚಿಂತ ಪಾಪಕ್ಕೂ ಪರಿಹಾರ.

Friday, April 29, 2016
Topic(s) of this poem: life
COMMENTS OF THE POEM
READ THIS POEM IN OTHER LANGUAGES
Close
Error Success