ಎಳೆಎಳೆದಂತೆ ಉದ್ದ ಬೆಳೆಯುವವರೆಗೆ Poem by Praveen Kumar in Bhavana

ಎಳೆಎಳೆದಂತೆ ಉದ್ದ ಬೆಳೆಯುವವರೆಗೆ

ಬೆಂಕಿಯ ನಡುವಲಿ ಬಿದ್ದು, ಕರಗುವ ವರೆಗೆ,
ಕರಗಿ, ಕೆಳಹರಿದು, ತಳದಲ್ಲಿ ಕೂಡುವವರೆಗೆ,
ಕಲ್ಮಶಗಳ ಹೊರಕೊಟ್ಟು, ತಾನಾಗಿ ಥಳಥಳ ಹೊಳೆಯುವವರೆಗೆ,
ಯಾವುದು ಚಿನ್ನ?

ಚಿನಿವಾರನ ಏಟು ತಿನ್ನುವವರೆಗೆ,
ಏಟಲಿ, ತೆಳ್ಳನೆ ಬೆಳೆಯುವವರೆಗೆ,
ಹರಿಯದೆ, ನುಲಿಯದೆ, ನಿಲ್ಲುವವರೆಗೆ,
ಯಾವುದು ಚಿನ್ನ?

ಎಳೆಎಳೆದಂತೆ, ಉದ್ದ, ಬೆಳೆಯುವವರೆಗೆ,
ಆದರಿಂದಿದರಿಂದ ಜೀರ್ಣವಾಗದ ವರೆಗೆ,
ಬೆರೆತರೂ, ತಾನಾಗಿ ಭಿನ್ನ ನಿಲ್ಲುವ ವರೆಗೆ,
ಯಾವುದು ಚಿನ್ನ?

ಬೇಕೆಂದಲ್ಲಿ ಚೆಲುವು ಚೆಲ್ಲುವವರೆಗೆ,
ಬಿಗಿಯಲ್ಲಿ ತನ್ನತನಗುಣ ಹಿಡಿದಿರುವವರೆಗೆ,
ವಿಶಿಷ್ಠತೆಯಿಂದ, ಗಮನ ಸೆಳೆಯುವವರೆಗೆ,
ಯಾವುದು ಚಿನ್ನ?

Friday, April 29, 2016
Topic(s) of this poem: life
COMMENTS OF THE POEM
READ THIS POEM IN OTHER LANGUAGES
Close
Error Success