ಅಣು ಅಣು ಭ್ರೂಣದಿಂದ ಹಿಡಿದು Poem by Praveen Kumar in Bhavana

ಅಣು ಅಣು ಭ್ರೂಣದಿಂದ ಹಿಡಿದು

ಎತ್ತ ನೋಡಿದರತ್ತ, ಅದೇನು ಕೌಶಲ್ಯ,
ಜೀವ ಬೆರಗಾಗುವ ಚಾಣಕ್ಷ್ಯ ಕೆಲಸ!
ಭಿತ್ತಿಗಳ ಬಿಚ್ಚಿ, ಒಳಗೊಳಗೆ ದಿಟ್ಟಿ ಹರಿಸಿದಂತೆ,
ಅದೇನು, ದಿಗ್ಭ್ರಾಂತಗೊಳಿಸುವ ಒಪ್ಪ ಓರಣ ವ್ಯವಸ್ಥೆ!
ಅದು, ಜೀವರಾಶಿಗಳ ಕ್ರಮ ಬದ್ದತೆಯೆ ಇರಲಿ,
ನಿರ್ಜೀವ ವಸ್ತುಗಳ ಓರಣತೆಯೆ ಇರಲಿ,
ಅಥವ, ಜೀವ ನಿರ್ಜೀವಿಗಳ ಹೊಂದಾಣಿಕೆಯೆ ಇರಲಿ,
ಅದೇನೋ ತಿಳಿಯದ ಕೈಯ ಕುಸುರಿನ ಗುರುತು;
ಅಣುಅಣು ಭ್ರೂಣದಿಂದ ಹಿಡಿದು,
ನಿಹಾರಿಕೆ, ನಿಹಾರಿಕೆಗಳನಂತ, ಭವ್ಯ ವ್ಯೂಹಗಳಾಚೆಗಿನವರೆಗೆ,
ಅದು ಹೇಗೆ, ಹೀಗೆ, ಗಾಢ ಮೂಡಿ ನಿಂತಿದೆ ಇಲ್ಲಿ,
ಬುಡದಿಂದ ಹಿಡಿದು, ಗೆಲ್ಲು, ಕೊಂಬೆ, ಹೂವು, ಹಣ್ಣು ಬೀಜದವರೆಗೆ?

ಎತ್ತ ನೋಡಿದರತ್ತ, ಅದೇನು ಚೆಲುವು,
ಜೀವ ಜೀವಗಳಲ್ಲಿ, ಜೀವ ನಿರ್ಜೀವಗಳಲ್ಲಿ,
ಅದೆಂತಹ ಸಾಮರಸ್ಯ ಉದ್ಭವಿಸುವ ಚಮತ್ಕಾರ!
ಸಮರಸತೆುಂದ ಲೋಕ ಮುನ್ನಡೆಸುವ ನೈಪುಣ್ಯ!
ಎಷ್ಟೊಂದು ವೈವಿಧ್ಯ, ವೈವಿಧ್ಯದಲ್ಲೂ ವೈವಿಧ್ಯ,
ಇದೆಲ್ಲ ಬರೆ ಪಂಚ ಭೂತಗಳಿಂದ, ಹೇಗಾುತು ಸಾಧ್ಯ?
ಬೆಳಕು, ನೆರಳುಗಳಿಂದ,
ರೇಖೆಗಳ, ವಿವಿಧ ಏರಿಳಿತಗಳಿಂದ,
ಶೀತೋಷ್ಣಗಳ ವಿಲಕ್ಷಣ ಮಿಶ್ರಣಗಳಿಂದ,
ಅನಂತಾನಂತ ಸಾಧ್ಯಬಾಧ್ಯತೆಗಳ ತರುವ,
ಈ ಲೋಕ, ಸ್ಠೃಸಿದ ಆ ವಿಶಿಷ್ಠ ನಿಷ್ಣಾತನಾರು?
ತನ್ನ ಸ್ಠೃಯ ಕಂಡು ಬೆರಗಾಗುವ ಆ ಅಮೂರ್ತ ಲೋಕ ಕರ್ತನಾರು?

ಎಲ್ಲದರಲ್ಲೂ ಸೌಂಧರ್ಯ, ಎಲ್ಲದರಲ್ಲೂ ಸಕ್ರಮತೆ,
ನೋಡಲು ದಿವ್ಯ ಕಣ್ಣುಗಳಿರಬೇಕು ಅಷ್ಟೆ;
ನಮ್ಮ ನಮ್ಮ ಬೊಗಸೆಗೆ ತಕ್ಕಂತೆ, ಸಿಕ್ಕುವ ರಮ್ಯ ದೃಶೈದ ಮೂಲ,
ನಾವು, ನಮ್ಮ ಹಬ್ಬಿರುವ ಈ ಲೋಕದ ಒಂದೊಂದು ವಸ್ತು;
ಭ್ರೂಣ, ಬಾಲ್ಯ, ಯೌವನ, ಪ್ರೌಢ, ಮುಪ್ಪಿನ ಸರಣಿಯೆುರಲಿ,
ಶಿಶಿರ, ವಸಂತ, ಗ್ರೀಷ್ಮ, ಶರತ್ ಋತುಗಳ ಏರಿಳಿತಗಳೆ ಇರಲಿ,
ಅಥವ, ಉಷಕಾಲ, ಮಧ್ನಾಹ್ನ, ಸಂಜೆ, ರಾತ್ರಿಯ ವರ್ತುಲಗಳೆ ಇರಲಿ,
ಒಂದೊಂದರಲಿ, ಒಂದೊಂದು ಚೆಲುವು, ಪಾಳಿ, ಪದ್ಧತಿ, ರೀತಿ,
ರೂಢಿ, ಉಪೇಕ್ಷೆ ಹೊದಿಕೆುಂದ, ಹೊರಗೆ ಹರಿಯುವ ಕಣ್ಣುಗಳಿಗೆ ಮಾತ್ರ,
ಹೊರಪದರುಗಳ ಸೀಳಿ, ಒಳಗೆ ಬೆರೆಯುವ ಹೃದಯಗಳಿಗೆ ಮಾತ್ರ;
ಯಾರು ಯಾರಿಗೆ, ಎಷ್ಟೆಷ್ಟು ಬೇಕೋ, ಅಷ್ಟಷ್ಟೆ ಕೊಡುವ, ಈ ಲೋಕ,
ಎಲ್ಲ ಬಲ್ಲವರಿಗೆ ಮಾತ್ರ, ಪರಿಪೂರ್ಣತೆಯ ಸಾಕಾರ.

ಇದು ಎಲ್ಲ ಬಲ್ಲವರ ಸೊತ್ತು ಮಾತ್ರವಲ್ಲ,
ಜೀವ ನಿರ್ಜೀವಗಳೆಲ್ಲದರ, ಅಸ್ಥಿತ್ವದ ಗುಟ್ಟು,
ಈ ಲೋಕದ ವಸ್ತುಶ: ಮೈಕಟ್ಟು;
ಯಾರೆ ನೋಡಲಿ, ನೋಡದಿರಲಿ, ತನ್ನಿಂದ ತಾನೇ ಇರುವ,
ಆದಿುಂದ, ಅನಂತದ ವರೆಗೆ, ನಡೆಯುತ್ತಲೆ ಇರುವ,
ಅಮೂರ್ತ ಕೌಶಲ್ಯದ ಪರಿಪೂರ್ಣ ಸಾಕಾರ;
ನೋವು, ಸಂತೋಷವೆ ಇರಲಿ, ದ್ವೇಶ, ಪ್ರೀತಿಯೆ ಇರಲಿ,
ರೂಪ, ಕುರೂಪವೆ ಇರಲಿ, ಅಶೆ, ನಿರಾಶೆಯೆ ಇರಲಿ,
ಎಲ್ಲದರಲಿ ಮೈಗೂಡಿರುವ, ವಿಲಕ್ಷಣ ಸೃಷ್ಠ ಸೌಂಧರ್ಯ;
ಈ ಕೌಶಲ್ಯ, ಸ್ಠೃಕ್ರಿಯೆಯ ಮೂಲ ಮಂತ್ರ,
ಈ ಕೌಶಲ್ಯ, ಸ್ಠೃ ಮುನ್ನಡೆಸುವ ಗೂಢ ತಂತ್ರ,
ಕಾಣದ, ತಾಂತ್ರಿಕ, ಮಾಂತ್ರಿಕನ, ಪರಿಪಕ್ವ ಸಾಧನೆಯ ದಿವ್ಯ ಪರಿಫ್ಕಾರ.

ಆಕಾಶದ ನಿರಭ್ರ ನೀಲವೆ ಇರಲಿ,
ಮರ, ಗಿಡ, ಬಳ್ಳಿಗಳ, ಶ್ರೀಮಂತ ಹಸುರೆ ಇರಲಿ,
ಸಮುದ್ರ, ಸಾಗರಗಳ, ತೆರೆಯಲೆಗಳ ಶ್ರೇಣಿಯ, ಭೀಷಣತೆಯೆ ಇರಲಿ,
ಗಿರಿಗಳೌನ್ನತ್ಯ, ಕಣಿವೆ, ಕಂದರಗಳ ಆಳವೆ ಇರಲಿ,
ಅಥವ, ಯೌವನದ ಕಾವು, ವೃದ್ಧಾಪ್ಯದ ಜ್ಞಾನಶೀತಲತೆಯೆ ಇರಲಿ,
ಬಡತನದ ನೋವು, ಶ್ರೀಮಂತಿಕೆಯ ಧಾರಾಳತೆಯೆ ಇರಲಿ,
ಅಥವ, ಹುಟ್ಟು ಸಾವೇ ಇರಲಿ, ವಿವೇಕವಿವೇಕವೆ ಇರಲಿ,
ಎಲ್ಲದರಲಿ ಅದೇನೋ ತಿಳಿಯದ, ದಿವ್ಯ ಕೌಶಲ್ಯ,
ಅದೇನೋ ಭವ್ಯ ಸೌಂಧರ್ಯ, ರಮ್ಯ ಪರಿಷ್ಕಾರ;
ಯಾವುದೋ ವಿಶ್ವಪ್ರೇರಣೆಯ ಹೆಣಿಗೆಯ ಗ್ರಂಥಿಯೊಳಗಿಂದ,
ಅದಾವುದೋ ದಿವ್ಯ ಮೂಲೋದ್ದೇಶದತ್ತ ವಿಕಸಿಸುತ್ತಿದೆ, ವಿಶ್ವ,
ಕಾಲಶಿಲ್ಪಿಯ, ಆ ದಿವ್ಯ ಕೌಶಲ್ಯದ ಕಲಾಚಮತ್ಕಾರದಲ್ಲರಳಿ, ಮೂಡಿ, ಕೂಡಿ.

Friday, April 29, 2016
Topic(s) of this poem: life
COMMENTS OF THE POEM
READ THIS POEM IN OTHER LANGUAGES
Close
Error Success