ಸ್ಠೃಷ್ಠಿ ಸಾಗರದ ಮಧ್ಯದ ಬರೆ ಬುಧ್ಭುಧ ನಾವು Poem by Praveen Kumar in Bhavana

ಸ್ಠೃಷ್ಠಿ ಸಾಗರದ ಮಧ್ಯದ ಬರೆ ಬುಧ್ಭುಧ ನಾವು

ಆಕಾಶದಲ್ಲೆಲ್ಲ ಥಳಥಳ ಮಿನುಗುವ
ಕೋಟಿ ನಕ್ಷತ್ರದ ಮರೆಯಲ್ಲೆಲ್ಲೋ,
ಕತ್ತಲೆ ಬಿತ್ತರದ ಗಹ್ವರ ಗುಹೆಯಲ್ಲಿ,
ತಲೆಮೇಲೆತ್ತಿದ, ಬರೆ ಹುಳುಗಳು ನಾವು;
ಭವ್ಯಭಾಸುರ, ಈ ಭುವನದೆಲ್ಲೋ,
ನಮ್ಮಸ್ಥತ್ವದ ಕುಲ್ಲಕ ಬಲೆಯನ್ನು ಹೆಣೆದು,
ಬದುಕಲು ಸೆಣೆಸುವ ಜೀವಿಗಳೆಲ್ಲ.

ವೈಶಾಖ ಮಧ್ಯಾಹ್ನದ ಬಿಸಿಲಿನ ತಾಪ,
ಶಿಶಿರದ ಛಳಿ ರಾತ್ರಿಯ ಹಿಮಪಾತ,
ಪರ್ವತ ಕಂದರಗಳ ಏರಿಳಿತದ,
ಈ ಸ್ಠೃ ವೈಚಿತ್ರ್ಯದ ಮಹಾಪೂರದ ನಡುವೆ,
ಕೈಲಾಗದೆ ನಿಂತ ಅಸಾಹಯಕ ಜೀವ;
ಹುಟ್ಟಿದೆವೆಂದು ಬದುಕುವವರೆಗಿರುವ,
ಸ್ಠೃ ಸಾಗರದ ಮಧ್ಯದ, ಬರೆ ಬುದ್ಭುದ ನಾವು.

ದಿನರಾತ್ರಿಯ, ನಿಯತ ತಾಳದ ಮಧ್ಯೆ,
ಋತು ಚಕ್ರದನಂತಾವರ್ತನೆಯೊಳಗೆ,
ಸಂವತ್ಸರಯುಗಗಳ ವಿಸ್ಸಾರದ ಒಳಗೆ,
ಒಂದರೆಕ್ಷಣ ತೋರುವ ನೀರಿನ ಗುಳ್ಳೆ;
ವಿಶ್ವವಿಕಾಸದ ಭವ್ಯ ಪ್ರಕ್ರಿಯೆಯ ಮಧ್ಯೆ,
ಕಾಲದನಂತ ಹರವಿನ ಚಲನೆಯಲ್ಲೆಲ್ಲೋ,
ಮೂಡಿ, ಮರೆಯಾಗುವ ಕ್ಷಣಿಕರು ನಾವು.

Friday, April 29, 2016
Topic(s) of this poem: life
COMMENTS OF THE POEM
READ THIS POEM IN OTHER LANGUAGES
Close
Error Success