ಜೀವದ ಹುಟ್ಟು Poem by PRAVEEN KUMAR Kannada Poems

ಜೀವದ ಹುಟ್ಟು

ಹೊಸ ಜೀವದ ಹುಟ್ಟು
ಏನೊಂದು ವಿಚಿತ್ರವೊ!
ಹೊಸ ಜೀವನದ ಉಗಮ
ಎಂತಹ ನಿಸರ್ಗದಾಟವೊ!

ಆಕಾಶದಲ್ಲಿ ನಕ್ಷತ್ರದಷ್ಟು ತೆವಳುವ ಜೀವಗಂಟುಗಳು
ಅಂತರಿಕ್ಷ ತುಂಬ ತುಂಬಿ ಸ್ವಚ್ಛಂದ ಹಾರಾಡುವಾಗ,
ಎಲ್ಲೋ ಏನೋ ಪ್ರಕೃತಿಗೆ ತಾಕಿ ಹೊಡೆದು ತಾವು ಒಡೆಯುವಾಗ,
ನೋಡು ಏನು ವ್ಶೆಚಿತ್ರ್ಯವು, ಹೊಸತು ಜೀವದುಗಮವು!

ಒಂದು ಸಿಗಿದು ಎರಡು ಆಗಿ, ಎರಡು ನಾಲ್ಕು ಮುಂದೆ ಹೋಗಿ,
ಅಂಡ ಭ್ರೂಣ ದೇಹ ಆಗಿ, ನಿರ್ಜಿವದಿಂದ ಜೀವ ಆಗಿ,
ಹೊಸತು ಜೀವ, ಹೊಸತು ಲೋಕ, ಹೊಸ ಪೀಳಿಗೆಯ ಜನ್ಮವಾಗಿ,
ನಡೆಯುವ ಈ ಸ್ಟೃ ಕ್ರಿಯೆ ನಮ್ಮ ನಿಮ್ಮ ಮೂಲ, ಮೊಳಕೆ.

ಸೊನ್ನೆ ಸೊನ್ನೆ ಸೇರಿದಾಗ ಒಂದು ಹೇಗೆ ಮೂಡಿ ಬಂತು?
ಒಂದು ಒಂದು ಸೇರಿದಾಗ ಮತ್ತೊಂದು ಹೇಗೆ ಸೇರಿ ಬಂತು?
ಒಂದು, ಲಕ್ಷ ಕೋಟಿಯಾಗಿ, ಬೆಳೆದು ಮತ್ತೆ ಒಂದೆ ಆಗಿ,
ಎಲ್ಲಿಂದ ಹೊಸತು ಜೀವ ತಂದಿತು ನಮ್ಮ ಹಳೆಯ ಧರಿತ್ರಿಗೆ?

ಎಲ್ಲ ಜೀವ ಹುಟ್ಟು ಒಂದು ನಿಸರ್ಗದ ಆಕಸ್ಮಿಕ,
ಸ್ವಚ್ಛಂದ ತೆವಳಿ ಹರಿಯುವ ನಿರ್ಜೀವ ಕಣದ ಆಕಸ್ಮಿಕ,
ಮಣ್ಣು ನೀರು ಹೇಗೆ ಬೆರೆತು ಜೀವದುದಯವಾುತೊ?
ಎಲ್ಲಿಂದ ಹೇಗೆ ಜೀವವೊಂದು ಭ್ರೂಣವನ್ನು ಸೇರಿತೊ?

ನಿರ್ಲಿಪ್ತ ಲಿಪ್ತರೂಪವಾಂತು,
ಸಿಗಿದು, ಸಿಡಿದು ಕೋಟಿಯಾಗಿ,
ಕೂಡಿ ಒಂದು ಜೀವವಾಗಿ
ಅರಳುವುದು ಸ್ಠೃಯು.
ಅಲ್ಲೂ ಇಲ್ಲ, ಇಲ್ಲೂ ಇಲ್ಲ, ಒಂದಾದಾಗ ಎಲ್ಲಿಂದ ಬಂತು?
ವಸ್ತುವನ್ನು ಮೀರಿ ಹೇಗೆ ಕ್ರಿಯೆ ಮೂಲವಾುತು?
ನಿರ್ವಾತದಿಂದ ಬ್ರಹ್ಮಾಂಡವೆದ್ದು ಮೂಡಿ ಮೇಲೆ ಬಂದ ರೀತಿ,
ನಿರ್ವಾತದಿಂದ ಹೊಸತು ಜೀವ ಮೊಳೆತು ಭ್ರೂಣ ಸೇರಿತೊ?

ಜೀವ ಮೊಳೆತು ಚಿಗುರುವಲ್ಲಿ, ಜೀವ ಅಲ್ಲಿ ಅರಳುವಲ್ಲಿ,
ಪುಟ್ಟ ಪುಟ್ಟ ಎಲೆ ಎಸಳು, ರಂಗು, ಕಂಪು ಬೆರೆಯುವಲ್ಲಿ
ಎಂತ ತಾನ ಪ್ರಕ್ರಿಯೆ, ಎಂತ ಶ್ರುತಿ, ನಿಸರ್ಗ ಶಿಸ್ತು!
ಯಾವ ಪ್ರಜ್ಞೆ ಎಲ್ಲಿ ನಿಂತು, ಹೇಗೆ ನಿರ್ದೇಶಿಸುವುದೊ?

ಸಮಯ ಶಿಸ್ತು, ಸರದಿ ಶಿಸ್ತು, ಹದ ಮಿತ ಎಲ್ಲ ಶಿಸ್ತು,
ಕಾಣದಂತ ಕೈುಂದ ಬೇಕಾದುದೆಲ್ಲ ಬೇಕಾದಲ್ಲಿ ಸಿದ್ಧ,
ಹೃದಯ ಬಡಿತ, ಮಿದುಳು ಮಿಡಿತ, ಒಂದೊಂದು ಸೇರಿ ಬಂದು
ಕಾಣದಂತ, ಕೇಳದಂತ ಹೊಸತು ಜೀವ ಬರುವುದು.

ಯಾರವನು ಸೂತ್ರಧಾರ,
ಜೀವ ಕೊಡುವ ಮೋಡಿಗಾರ?
ಯಾವ ರೂಪ ಪ್ರಜ್ಞೆಯಾಗಿ
ಜೀವ ಯಂತ್ರ ನಡೆಸುವ?

Friday, April 29, 2016
Topic(s) of this poem: life
COMMENTS OF THE POEM
READ THIS POEM IN OTHER LANGUAGES
Close
Error Success