ದಿವ್ಯ ಬೆಳಕು Poem by PRAVEEN KUMAR Kannada Poems

ದಿವ್ಯ ಬೆಳಕು

ದೂರ ಲೋಕದ ದಿವ್ಯ ಬೆಳಕಿನ
ಪುಂಜ ನಮ್ಮೆಡೆ ಚೆಲ್ಲಿದೆ,
ಕಣ್ಣ ಕಚ್ಚುವ ಕಪ್ಪು ಕತ್ತಲೆ
ಮೆಲ್ಲ ಮೆಲ್ಲನೆ ಕರಗಿದೆ,
ಧೈರ್ಯ ಕುಂದಿದ ಹೃದಯ ಹಂದರ
ಜೀವ ತುಂದಿಲವಾಗಿದೆ,
ಗಾಳಿ ಬೆನ್ನನ್ನೇರಿ ಹಾರುವ
ಹರ್ಷ ಮೈಮನವೇರಿದೆ,
ಎಲ್ಲಿ ನೋಡೆದರಲ್ಲಿ ಬೆಳಕು,
ಕಣ್ಣ ಮುಚ್ಚಿದರಲ್ಲಿ ತಳಕು,
ಕನಸು ಜೀವನವಾಗಿದೆ.

ಯಾವ ಗೂಢ ವಿಶ್ವಕಾರಣ
ದಿವ್ಯ ಬೆಳಕಿಗೆ ಪ್ರೇರಣ?
ಯಾವ ಮೂಲದ ಮುಕ್ತ ಪ್ರಾಣ
ತಂದಿತೆಮಗೀ ತಜ್ಜತ್ರಾಣ?
ಯಾವ ದೂರದ ಲೋಕದಿಂದ,
ಯಾವ ಕಾಲಾಕಾಶದಿಂದ
ಹರ್ಷ ಹೊಳೆ ಹೊನಲಾಗಿದೆ,
ಬೆಳಕು ಮಳೆಯ ಸುರಿಸಿದೆ?

Friday, April 29, 2016
Topic(s) of this poem: life
COMMENTS OF THE POEM
READ THIS POEM IN OTHER LANGUAGES
Close
Error Success