ಬಾಗಿಲು ತೆರೆದಿದೆ Poem by Praveen Kumar in Bhavana

ಬಾಗಿಲು ತೆರೆದಿದೆ

ದಾರಿಯಗಲವಿದೆ, ಬಾಗಿಲು ತೆರೆದಿದೆ,
ಆತುರದಿ ಸ್ವಾಗತಕೆ ಕಾದಿರುವೆ ನಾನು;
ಬರುವವರೆಲ್ಲ ಬನ್ನಿ ಮುಜುಗರಗಳ ಮರೆತು,
ಗುಣಾವಗುಣ ಜಾತಿಯಂತಸ್ತು ಮರೆತು,
ಭೇದ ಭಾವಗಳಿಲ್ಲದ ಪರಾರ್ಥದ ಮನೆಗೆ;
ಕೈಕಾಲು ಬಿಡಿಸಿ ಬನ್ನಿ, ಕಣ್ಣುಗಳ ಮುಚ್ಚಿ ಬನ್ನಿ,
ಹೃದಯ ಮಾತ್ರ ಬಿಚ್ಚಿ ಬನ್ನಿ ನಿಮ್ಮದೇ ಮನೆಗೆ.

ಹೆಜ್ಜೆುಟ್ಟಲ್ಲಿಲ್ಲಿ ಹಿತ ಸಂಗೀತ ಕೇಳುವಿರಿ,
ಕಣ್ಣಿಟ್ಟಲ್ಲೆಲ್ಲ ಮುಂಜಾನೆ ಕಿರಣ ಕಾಣುವಿರಿ,
ಸಾವಿರ ಹೂವು ಸ್ವಾದಗಳ, ಕಂಡರಿಯದ ತನಿ ಬಣ್ಣಗಳ
ಎದೆಯಲ್ಲಿ ಧರಿಸಿರುವ ಕನಸಿನರಮನೆಗೆ ಬನ್ನಿ,
ಜ್ಞಾನಿ ವೈರಾಗಿಯ ಶಾಚಿತ ರಸಭಾವ ಸಂಗಮಕೆ ಬನ್ನಿ.

ಇಲ್ಲಿ ಮಟ್ಟ ಮಧ್ಯಾಹ್ನದ ಬೇಸುಗೆ ಪ್ರಖರತೆುಲ್ಲ,
ಎಳೆಯೆಲೆಗಳ ಬಾಡಿಸುವ ದಟ್ಟ ಬಿಸಿಲುಗಳಿಲ್ಲ,
ಮಾಘ ಮಾಸದ ಶೀತಲ ಮ್ಲಾನ ಹವಮಾನವಿಲ್ಲ;
ಬೆಚ್ಚನೆಯ ಹಿತ ಸಂಬಂಧದಲಿ ರಂಗೇರಿದ ಮೈಮನದಲ್ಲಿ
ಸ್ವಾಗತಿಸಲೆಂದೆ ನಿಂತಿರುವೆ ಪರಿವಾರ ಜನ ಸಹಿತ;
ಕೈ ಹಿಡಿದು ಗರ್ಭಗುಡಿಗೊಯ್ದು ಹಚ್ಚುವೆನು ದೀಪ,
ಹೃದಯ ಪೀಠವನ್ನಿಟ್ಟು ಕೂಡಿಸಿ ಮಾಡುವೆನು ಪೂಜೆ.

ಭೂಸ ತುಂಬಿದ ಬೆದರುಗೊಂಬೆಗಳಿಲ್ಲಿ ಸೆಟೆಯುವರು,
ಹೊಸ ಜೀವ, ಹೊಸ ಸತ್ವದಲಿ ಬೀಗಿ ಸುತ್ತಾಡುವರು,
ಮಾತು ಮಾತಲಿ ಮತಿ ಮಥನದ ಭರ್ತನೆ ತೋರುವರು,
ಮಳೆ ಹೊತ್ತುನಿಂತ ಮೋಡಗಳ ಗುಡುಗು ಘರ್ಜನೆಯಂತೆ,
ಕಡಲ ತಡಿ ತೊಳೆವ ತೆರೆಯಬ್ಬರದ ಭೋರ್ಗರೆತದಂತೆ,
ನೀಲಾಕಾಶಕೆ ನೆಗೆದು ತಾರೆಗಳ ಕಿತ್ತು ಕೂಡಿಟ್ಟು
ಹೊಸ ಲೋಕ, ಹೊಸಾಕಾಶ, ಹೊಸ ಸ್ಟೃಯವತರಿಸುವರು.

ಹೆಜ್ಜೆ ಹೆಜ್ಜೆಗೆುಲ್ಲಿ ಕದಬಾಗಿಲುಗಳ ಗೊಡಮೆಲ್ಲ,
ನೀತಿ ನಿಯಮದ ದುಷ್ಟ ಬಲೆ ಪಂಜರಗಳಿಲ್ಲ;
ಹೃದಯ ವಿದಿಸಿದೆ ದಾರಿ, ಸಂವೇದನೆಯೆ ಬೆಳಕು,
ಹಿತ ಕಲ್ಪನೆಯ ಸುಳಿ ಕಣ್ಣಿಗೆ ದಿಗಂತವೆ ಇತಿಮಿತಿ;
ಹೊಸಗಾಳಿ, ಹೊಸ ಅರ್ಥ, ಹೊಸ ಹೊಸ ರಸ ಭಾಷೆ
ಪ್ರವಾಹದೋಪದಿ ಹರಿದು ನೆಲೆತಲೆ ತುಂಬಿರುವ ಮನೆಯಲ್ಲಿ
ಒಳ ಬಂದವರಲ್ಲ ಹಿತವರು, ನೆಲೆ ನಿಂತವರೆಲ್ಲ ಪ್ರಭುಗಳು.

ಕವಚಗಳ ಕವಚಿ ಬನ್ನಿ, ಇದ್ದುದೆಲ್ಲ ತೆರೆದು ಬನ್ನಿ,
ನಮ್ಮ ನಿಮ್ಮ ತೆರೆಯ ತೆರೆದು ಹೃದಯ ಹೃದಯ ಮುಟ್ಟಿ ಬನ್ನಿ,
ಹೇಗೂ ಬನ್ನಿ, ಬಂದೆ ಬನ್ನಿ, ಹೃದಯ ಗುಡಿಗೆ ಬಂದೆ ಬನ್ನಿ,
ನಂದಾ ದೀಪ ಬೆಳಕು ಹೊತ್ತು ಬಯಕೆ ರಾತ್ರಿ ತೀಡಿ ಬನ್ನಿ,
ನುಗ್ಗಿ ಬನ್ನಿ, ಹರಿದು ಬನ್ನಿ, ಮನೆಯ ತುಂಬ ತುಂಬಿ ಬನ್ನಿ,
ಮನಸು ಮನಸು ಬೆಸುಗೆಯಾಗಿ, ದೇಹಕಾದ ಲೋಹವಾಗಿ
ಮಿಶ್ರಲೋಹ ಮೂಡಿ ಬರಲು ಕುದಿದು ಮನೆಗೆ ನುಗ್ಗಿ ಬನ್ನಿ.

ಮನೆಯ ಮೋಹ ಇರದ ಹೊರತು ಹೇಗೆ ತಾನೆ ಬರುವಿರಿ,
ಅಗಲ ದಾರಿ, ತೆರೆದ ದ್ವಾರ ಮೂಗುದಾರವಾಗದು;
ಒಳಗೆ ಬೆಳಕು ಬೆಚ್ಚ ಭಾವ ಭಿತ್ತಿ ಬಿಚ್ಚಿ ಕಾಣದು,
ಆರ್ತ ಕರೆಯ ಅರ್ಥ ಮರೆತು ಬೇರೆ ದಾರಿ ಹಿಡಿವಿರಿ;
ಗರ್ಭಗುಡಿಯ ಹೃದಯಪೀಠವಿನ್ನೂ ಕಾದು ನಿಂತಿದೆ,
ಕತ್ತಲಲ್ಲಿ ಪೂಜೆಗಾಗಿ ಕಾದು ಕಾದು ಸಾಕಾಗಿದೆ.

Friday, April 29, 2016
Topic(s) of this poem: life
COMMENTS OF THE POEM
READ THIS POEM IN OTHER LANGUAGES
Close
Error Success