ಸಂಗೀತ Poem by PRAVEEN KUMAR Kannada Poems

ಸಂಗೀತ

ನೀ
ಬಾ,
ತಾ
ನಾ
ಬಯಸಿದೆಲ್ಲ,

ತಾಳ
ತಾನ
ರಾಗ
ಧಾಟಿ
ಕೂಡಿ ತಂದು,
ಗೀತ
ವಾದ್ಯ
ನರ್ತನ,
ರಸ
ಕಾವ್ಯ
ಅರ್ಥಾಂತರ

ತೊಟ್ಟು
ಏರಿ
ಇಳಿದು
ಹೃದಯದೊಳಗೆ
ನೇರ ಬಾ
ಭಾವ ತಾ.

ನೀ
ನಾ
ಅದ್ವೈತವಾಗಿ
ಆನಂದವಾಗಿ
ಹಂಸವೇರಿ
ರೆಕ್ಕೆಮೇಲೆ

ಕನಸು ನೆನಸು
ಭೇದ ಮರೆತು
ಕಲ್ಪನೆಯ ವಿಲಾಸವರಿತು
ಭೃಂಗವಾಗಿ
ತರಂಗವಾಗಿ
ಅಂತರಿಕ್ಷ
ಸುತ್ತಿ ಸುತ್ತಿ
ಬಾನಿನಾಚೆ
ನಿದ್ರೆುಂದೀಚೆ
ಪ್ರಖರ ಪ್ರಜ್ಞೆ
ಲೋಕದಲ್ಲಿ
ಅದ್ವೈತ ಭಾವ
ಮೀಟುವ.

ಆಲಾಪ
ಕಲಾಪ
ಏರಿಳಿತ
ಕಾಂತ ಸಮ್ಮಿತ,
ಗುಣಿಸಿ
ತಣಿಸಿ
ಮುಟ್ಟುವ
ಸಹೃದಯತೆ.

ಅಲೆ ಅಲೆ
ಭಾವ ಸೆಲೆ
ಮೇಲೆ ಮೇಲೆ
ಹಬ್ಬಿ ತರುವ
ಉನ್ಮಾದ,
ಬಣ್ಣ ಲೋಕ
ಸುಸ್ವಾದ
ತೇಲಿ ತರುವ
ದಿವ್ಯನಾದ
ಸಂಗೀತ.

ಸ್ತಬ್ಧ
ಶಬ್ದ
ತಾಳ
ಮೇಳ
ರಾಗ
ಅವೇಗ
ಪಲ್ಲವಿ,
ರಸ
ಭಾವ
ಜೀವ
ಕೊಡುವ
ಅಲೌಕಿಕ
ಆತ್ಮ ಸಂಕರ.

ಸಂ
ಗೀತ
ಹೃದಯ ಗೀತ
ಆತ್ಮ ಮಿಡಿತ,
ಆತ್ಮ ಹೃದಯ
ಸಂಗಮ,
ಜೀವ ಭಾವ
ಭಾವರಾಗ
ಸಂತೋಲನ.

ಭೂಮಿಯಲ್ಲ
ಆಕಾಶವಲ್ಲ,
ನಡುವೆ
ಸ್ವತಂತ್ರ
ಸ್ಪಂದನ,
ಜೀವ ಆತ್ಮ
ಬಂಧನ.

ಭಾವ
ತೆರೆಯ ಬೆನ್ನನೇರಿ
ಹೊಟ್ಟೆಗಿಳಿದು
ನಲಿದು
ಕುಣಿದು
ಹೃದಯ ಕುಟ್ಟಿ
ಮನಸು ಮುಟ್ಟಿ
ಜೀವ ತುಂಬುವ
ಆತ್ಮ ಸಂಜೀವನ.

Friday, April 29, 2016
Topic(s) of this poem: music
COMMENTS OF THE POEM
READ THIS POEM IN OTHER LANGUAGES
Close
Error Success