ನಮ್ಮ ದೇಶ Poem by PRAVEEN KUMAR Kannada Poems

ನಮ್ಮ ದೇಶ

ಮಾನವ ಕುಲ ದೇಗುಲವೀ ದೇಶ,
ಧರ್ಮ, ಸಂಸ್ಸøತಿಯಕ್ಷಯ ಕೋಶ;
ಆದರದಿ ಕೈನೀಡಿ, ಎಲ್ಲರನು ಸತ್ಕರಿಸಿ,
ಎಲ್ಲರನು ಸ್ವೀಕರಿಸಿ ಬೆಳೆದ ಶ್ರೀ ಭಂಡಾರ.

ಅಹಿಂಸೆಯ ಅಗತ್ಯ ಶಕ್ತಿಯ ಬಾವುಟವನೆತ್ತಿ
ಧರ್ಮ, ನೀತಿ, ರಾಜಕೀಯಕೆ ತಿಕ್ಕಿ,
ಮಾನವ ಕುಲ ಮೇಲ್ಮೆಯ ಮೇಲೆತ್ತಿದ
ಬುದ್ಧ, ಗಾಂಧಿ, ಅಶೋಕರ ಪರಿಸರ.

ಹಿಂದು ಹೊನಲನು ಹರಿಸಿದ ಬಯಲು,
ಬೌದ್ಧ, ಜೈನ, ಸಿಕ್ಕರ ತತ್ತದ ತೊಟ್ಟಿಲು,
ಕ್ರೈಸ್ತ, ಪಾರ್ಸಿ, ಮುಸಲ್ಮಾನರ ಮೆಟ್ಟಿಲು,
ಗಣಿತ, ಖಗೋಲಕೆ ಹಾಲುಣಿಸಿದ ಬಟ್ಟಲು.

ಹಿಮಾಲಯದೆತ್ತರ ವೇರುವ ತತ್ವ,
ಭೂಕಂದರದಾಳದಧ್ಯಾತ್ಮದ ಸತ್ವ
ಪರಂಪರೆ ಮುನ್ನಡೆಸಿದುದೀ ಈ ಭಾರತ
ಸರ್ವೊದಯಕೆ ಹೋರಾಡಿದ ದೇಶ.

COMMENTS OF THE POEM
READ THIS POEM IN OTHER LANGUAGES
Close
Error Success