ಪ್ರಶಾಂತಿ Poem by PRAVEEN KUMAR Kannada Poems

ಪ್ರಶಾಂತಿ

ಯಾಕೀ ಉದ್ವೇಗ, ಯಾಕೀ ಉದ್ರೇಕ?
ಯಾಕೀ ಆಡಂಬರ, ಯಾಕೀ ಪ್ರದರ್ಶನ?
ಯಾಕೀ ಹೋರಾಟ, ಹಾಕೀ ವಂಚನೆ?
ಬಿರುಗಾಳಿಯನೆಬ್ಬಿಸಿ ಗೆದ್ದವರಾರು?
ಗೊಂದಲ ಹುಟ್ಟಿಸಿ ಶಾಚಿತಿ ಹೊಂದಿದರಾರು?
ಶಾಂತಿ ಸಂಪತ್ತಿಗೆ ಬೆಟ್ಟ ಹತ್ತುವುದೇಕೆ?
ಜನರಾಶಿಯ ಮುಂದೆ ಬಟ್ಟೆ ಬಿಚ್ಚುವುದೇಕೆ?
ದಬ್ಬಾಳಿಕೆ ದ್ವಂದ್ವ ಗೆಲುವುದು ಉಂಟೆ?
ತುಕ್ಕನ್ನು ತಿಕ್ಕಿ, ಉಕ್ಕು ಹೆಬ್ಬಾಗಿಲ ತೆರೆದು
ಕತ್ತಲು ಸತ್ತಿರುವ ಗುಂಹರಕ್ಕಿಳಿದಾಗ,
ಶಾಂತಿ ಪದರುಗಳ ದಿಬ್ಬಗಳ ರಾಶಿಗಳು
ತುಂಬಿರುವ ಒಳಲೋಕ ಮೇಲೇರಿ ಕಾಣುವುವು.

ಪ್ರಶಾಂತಿ ಅಂತರ್ಗಂಗೆ, ಗುಪ್ತದಿವ್ಯ ಪ್ರವಾಹ,
ನೆಲದಾಳದಲಿ ಹರಿವ ಸ್ಫಟಿಕ ಅಂತರ್ಜಲ ಧಾರೆ,
ಎದೆ ಬಗೆದು ಹೊರ ತೆಗೆವ ಕರ್ಣಕುಂಡಲ ಕುಂಡ;
ಯುದ್ಧ, ಪಶುಪತಾಸ್ತ್ರದಿ ತೆರುವ ರಕ್ತಸಿಕ್ತ ಜಯವಲ್ಲ,
ಭಾತ್ರಹತ್ಯೆಯ ಕೊಡುವ ರಾಜಪದ ಸಂಭ್ರಮವಲ್ಲ,
ಉದ್ವೇಗ ಚಪಲಗಳ ಕಟ್ಟಿ, ಪಂಚೇಂದ್ರಿಯಗಳ ತೆರೆದು
ಎದೆಗೆ ಕಿಮಿಟ್ಟಾಗ ಬರುವ ಮೌನ ಸಂಗೀತ;
ತೇಲಾಡುÀವ ಚಪಲ ವಿರೋಧಾಭಾಸಗಳ ತಡೆದು
ಅಂತರಾಳವ ಕನ್ನಡಿಯಲ್ಲಿ ಒಗ್ಗೂಡಿಸಿ ಹಿಡಿದು
ಬೆಳಕಾಗಿ ಪ್ರವಹಿಸಲು, ಮೂಡುವುದು ಪ್ರಶಾಂತಿ;
ನಿರಾಡಂಬರ, ಸದೃಢ, ಮೂಕಸಂವೇದ,
ಪ್ರಶಾಂತ ಪ್ರವಾಹದ ನಾದ, ವಿನೋದ, ಆನಂದ.

Saturday, April 30, 2016
Topic(s) of this poem: life
COMMENTS OF THE POEM
READ THIS POEM IN OTHER LANGUAGES
Close
Error Success