ಕೋಪ Poem by Praveen Kumar in Bhavana

ಕೋಪ

ಕೋಪಧಗೆಯಲಿ ಬೆಂದು ಶುದ್ಧರಾದವರಿಲ್ಲ,
ಕೆಂಪು ಕಣ್ಣಿನ ಸೋಂಕು ಕೈವಲ್ಯಸುಖ ತಂದಿಲ್ಲ,
ಶಿವತಾಂಡವ ನೋಡಿ ನಿರ್ಮಲ ಶಾಂತಿ ಕಂಡವರಿಲ್ಲ;
ಕೋಪ ಕೆದರಿದ ಮೇಲೆ ನ್ಯಾಯನ್ಯಾಯ ಕಾಣುವುದಿಲ್ಲ,
ಬುದ್ಧಿ ಕಬಳಿಸುವ ಬೆಂಕಿ ಹಬ್ಬಿ ದಾರಿಯುದ್ಧ
ಬೆನ್ನಟ್ಟಿ ಉರಿಸುವುವು ಕಾಲ, ನೆಲ, ಗಾಳಿ ಸ್ಥಿತಪ್ರಜ್ಞೆ.

Saturday, April 30, 2016
Topic(s) of this poem: anger
COMMENTS OF THE POEM
READ THIS POEM IN OTHER LANGUAGES
Close
Error Success