ಶುದ್ಧ ಜೀವನ Poem by Praveen Kumar in Bhavana

ಶುದ್ಧ ಜೀವನ

ಮಾತು ಮುತ್ತು ಚೆಲ್ಲಿ
ಹುಳುಕಿನ ಹುತ್ತಕ್ಕೆ ಹಾಲೆರೆಯ ಬೇಡ,
ಜ್ಞಾನ ದ್ಟೃ, ಶ್ರವಣ, ಗ್ರಹಣ ಬುದ್ಧಿ ಹುರಿಗೊಂಡು
ಬೆಳಕಿನನಲಿ ನಡೆಯುವುದೆ ಜೀವನದ ಶುದ್ಧಿ;
ಪರಕಾರ್ಯ ಹಾದಿಯಲಿ ಮೂಗು ತುರುಕದ ನೇರ
ಸ್ವಂತ ಗಮನವು ಮುನ್ನಡೆಸಬೇಕು,
ಕಂಪಿಸದೆ, ತತ್ತರಿಸದೆ, ಸಬಲ ನಿಶ್ಚಲನಾಗಿ
ತಗ್ಗಿ ಬಗ್ಗಿ ಗಮಿಸುವವ ವಿಜು, ತ್ಯಾಗಿ, ಬೋಗಿ;
ಜೀವನಲವಣದಲಿ ಸಬಲ ದ್ರಾವಣವಾಗಿ
ತಿಳಿಕೊಡುವ ತಿಳುವಳಿಕೆ ತಳಗೂಡಬೇಕು,
ಕಾಲ ಕೈಕೊಟ್ಟಾಗ, ಸಮತೆ ವಿಷಮಿಸಿದಾಗ ಮಾತ್ರ
ಹಿಡಿತ ಬಿಗಿತದ ಬುದ್ಧಿ, ಜಾಣತನ ಬೇಕು;
ಗೌರವದ ಗುರುಭಾವ ಸುತ್ತಮುತ್ತ ಜನರತ್ತ
ನುಡಿನಡತೆಯಲಿ, ನರನಾಡಿಯಲಿ ಬೆಸೆದಿರಬೇಕು
ಐಷಾರಾಮ, ಸುಖಸುಧೆ ಧಾರೆಯನು ಹೀರಿ
ಜೀವನದ ಸವಿನವಿರಿಗೆ ಕವಿಯಾಗಬೇಕು.

Saturday, April 30, 2016
Topic(s) of this poem: life
COMMENTS OF THE POEM
READ THIS POEM IN OTHER LANGUAGES
Close
Error Success