ಹುಟ್ಟು Poem by Praveen Kumar in Bhavana

ಹುಟ್ಟು

ಹುಟ್ಟು ರಸವಿರಸಗಳ ಕಟ್ಟು,
ದಿನರಾತ್ರಿ, ಸುಖದು: ಖಗಳ ಮೊದಲಿನ ಮೆಟ್ಟು;
ಮುಗ್ಗರಿಸುವ, ಸರಿುಡುವ ಹೆಜ್ಜೆಗಳ ಸೆಜ್ಜೆ,
ಭವಿಷ್ಯದ ಬೀಜ, ಮೊದಲಿನ ಪಾಠ,
ಸ್ಠೃ ಕ್ರಿಯೆಯ ಗೋಪ್ಯ ಶಕ್ತಿಕೋಶ,

ಅನಂತ ಕತ್ತಲೆ ಸಿಗಿದು ಬಂದು
ಬೆಳಕಲ್ಲಿ ಮೊಳೆಯುವ ಉಷತ್ಕಾಲ,
ಗುರಿ ಮರೆತ ಮೊರೆತದ ಕಾಲಗತಿ ಸುಳಿಯಲ್ಲಿ
ಸುತ್ತಿಟ್ಟ ಕಗ್ಗತ್ತಲಿನ ಹೆಪ್ಪನ್ನು ಬಸಿದು
ಕಾಲಗರ್ಭದಿ ಜೀವ ಉದಯಿಸುವ ಮೋಡಿ.

Saturday, April 30, 2016
Topic(s) of this poem: life
COMMENTS OF THE POEM
READ THIS POEM IN OTHER LANGUAGES
Close
Error Success