ಆಡಳಿತದ ಪಿತೂರಿ Poem by Praveen Kumar in Bhavana

ಆಡಳಿತದ ಪಿತೂರಿ

ಆಡಳಿತ ನಾಡಿನ ಬಾಡಿಗೆ ಕಡಗ,
ಶೋಕಿಗೆ ತೊಟ್ಟ ಬೆಡಗಿನ ಬೇಡಿ,
ಸಂಚು, ಹೊಂಚು, ವಂಚನೆ, ರಂಜನೆ
ಅಲೌಕಿಕವಾಗುವ ಪಿತೂರಿಯ ಯೋಜನೆ.

ಪ್ರಕೃತಿ ಮೀರಿದ ಕೃತ್ರಿಮ ವಿಧಿಗಳ
ವಿಕೃತ ಬಲೆಯ ಬಲಾತ್ಕಾರದ ಬಂಧನೆ,
ಪ್ರಭಾವಿ ಹಿಡಿತದ ಪುಂಡು ಶೋಷಣೆ
ಸಾಮಾನ್ಯನ ರಕ್ತವ ಹೀರುವ ಸಾಧನೆ.

ಶಿಷ್ಠಸಾಷ್ಠವ, ನ್ಯಾಯಸಾದಕವೆಂದು
ಬಿಚ್ಚಿದ ಕಣ್ಣಲಿ ಕತ್ತಲಲ್ಲರಸುತ,
ಬಚ್ಚಿಟ್ಟ ಸಾಕ್ಷಮೂಟೆಯ ತಂದು
ನ್ಯಾಯದ ಬಣ್ಣ ಬಳಿಯುವ ಯಂತ್ರ.

Saturday, April 30, 2016
Topic(s) of this poem: life
COMMENTS OF THE POEM
READ THIS POEM IN OTHER LANGUAGES
Close
Error Success