ಹಕ್ಕು Poem by PRAVEEN KUMAR Kannada Poems

ಹಕ್ಕು

ಹಕ್ಕು, ಮೈಮರೆತಾಕ್ಷಣ ಜಾರಿ ಹಾರುವ ಹಕ್ಕಿ,
ಹಾರಿ, ಆಕಾಶನೆಗೆದು, ಪರಕಾಯ ಸೇರುವ
ಪರಭಾರೆ ಭೂತ, ಇಚ್ಛಾವೃತ್ತಿ ದೆವ್ವ;
ಕೈಯಲ್ಲಿದ್ದೂ ಇದ್ದಂತಿರುವುದಿಲ್ಲ,
ಕೈಯಲ್ಲಿದ್ದೂ ಕೈಮೀರುವ ನಾಜೂಕು ದೇಹ,
ಕಾದಾಟ, ಮನಸ್ತಾಪ, ತಿಕ್ಕಾಟ, ವ್ಯಾಜ್ಯ;
ದೆವ್ವಕಾಟ, ನಿರಾಶೆ ಹಕ್ಕುಸಿಕ್ಕಿನಲಿ ಸಿಕ್ಕವನ ಪಾಡು.

Saturday, April 30, 2016
Topic(s) of this poem: rights
COMMENTS OF THE POEM
READ THIS POEM IN OTHER LANGUAGES
Close
Error Success