ಭಾಷೆ ಭಾವ ಚಿಂತನೆಯ ಹೃದಯ ಸ್ಫಂದನ,
ಅಂತ: ಕರಣದ ವಾಹನ;
ಮನ ಮಂಥನದಲ್ಲೇರುವ ನೊರೆತೊರೆ ಪ್ರಪಾತ;
ಭಾಷೆ, ಮಾನವ ಸ್ಥಿತಿಹಾಡಿಗೆ ಪ್ರಾಕೃತ ಸಂಗೀತ,
ಹೃದಯ ಹಂದರ ಮೀರುವ ಚಿತ್ತವೃತ್ತಿಯ ಪ್ರೇಷಕ:
ಜ್ಞಾನದೇಗುಲ ಕಟ್ಟಡ ಕಲ್ಲುಸಾಲಿನ ಸ್ಥಾವರ,
ಪ್ರೀತಿ, ದ್ವೇಶ, ಕೋಪ, ಶಾಪ ಸಂದೇಶದ ಸಂದನ,
ಪುರುಷ-ಪ್ರಕೃತಿ ತಾಳತಾನದ ಬಂಧನ.
This poem has not been translated into any other language yet.
I would like to translate this poem