ಕರೆದಾಗ ಬರುವವಳಲ್ಲ,
ಮೈಮರೆತಾಗ ಮನಮಂಡಲದಲ್ಲಿ
ಬಳಕು ಸೆರಗನು ಚೆಲ್ಲಿ, ಬೆಳ್ಳಿ
ಬೆಳಕಲಿ ತೇಲಿ, ಜಾರಿ, ಮೇಲೇರಿ,
ಚುಂಬಕ ಚುಂಬನವಿಟ್ಟು ಹಾರುವ
ರಸನಷೆ, ಬೆಡಗಿನ ಬಳ್ಳಿ ಉಷೆ.
ರಾಶಿಹಣದಲ್ಲಿ ಮೈಮಾರಿ ನೆರೆವ
ಕಾಮುಕ ವ್ಯಾಪಾರ ಸೊತ್ತು ಅವಳಲ್ಲ,
ಬಾಚಿ ಜನರನ್ನು ಮೈಮಾರಿ ಕರೆವ
ಯೌವನದ ನಶ್ವರ ವಾಂಛಲ್ಯವಲ್ಲ.
This poem has not been translated into any other language yet.
I would like to translate this poem