ಸಂಗೀತ ಸಮರಸತೆ Poem by Praveen Kumar in Bhavana

ಸಂಗೀತ ಸಮರಸತೆ

ಸಮರಸ ತರುವ ಸಂಗೀತದ ಧಾರೆ
ಹೃದಯ ಸ್ಪಂದಿಸುವ ಆತ್ಮ ಸಂಗಾತಿ,
ಮಧುರತೆ ಚಿಗುರುವ ನಿಸರ್ಗದ ಮೋಡಿ,
ಅಲೆ ಅಲೆಯಾಗಿ ಮನಸ್ಸನು ಬೆಸೆದು
ಗಾಳಿಲಿ ತೇಲಿಸಿ ಮೈಮುಟ್ಟುವುದು;
ಸಂಗೀತದ ಸುಮಧುರ ಕಾರಂಜಿಯಲಿ
ಆತ್ಮರತ ರತ್ನ ದ್ರವಿಸುತ ಹರಿವುವು,
ದೇಹ ಮನ ಆತ್ಮಗಳ ತೀಡಿ ತಿಕ್ಕಿ ಪ್ರಜ್ವಲಿಸಿ
ಭಾವಜ್ಞಾನ ಜ್ಯೋತಿಯಲಿ ಅದ್ದಿ ಶುದ್ಧಗೊಳಿಸುವುದು;
ನಿಶ್ಚೇತ ಕೊರಡಿನಲಿ ಚಿಗುರನ್ನು ತರಬಲ್ಲ
ಪ್ರತಿಸ್ಟೃದಾತೆ ಸಂಗೀತಧಾರೆ;
ಸಂಗೀತದ ತಾಳದಲಿ ಅಲೌಕಿಕದ ಲಾವಣ್ಯವಿದೆ,
ಸಂಗೀತದ ನುಡಿಯಲ್ಲಿ ಆತ್ಮಸಾಂಗತ್ಯವಿದೆ,
ಸಂಗೀತದ ನಡೆಯಲ್ಲಿ ಮಹಾಕಾವ್ಯ ಲಾಲಿತ್ಯವಿದೆ,
ಆ ಸಾಗರದಾಳ ತೀವ್ರತೆಯಲ್ಲಿ, ಹಿಮಾಲಯದೌನ್ನತ್ಯದಲಿ
ಭಾವ ನಿರ್ದೇಶನದ ದಿವ್ಯತಾನ ಸಂಗೀತವಿದೆ;
ಗಿಡ, ಮೋಡ, ಹಕ್ಕಿಗಳ ಹಾಡುಗಳ ಪ್ರತಿರೂಪ,
ಭೂಮಿಗಿಳಿದಿರುವ ಆಧ್ಯಾತ್ಮ ಸಂಗೀತ,
ಕತ್ತಲನು ನುಂಗಿ ಬೆಳಕೀವ ಪರಂಜ್ಯೋತಿ,
ಮನ ಮುಟ್ಟಿ ನುಡಿದು, ತಾಮಸವನ್ನಳಿಸಿ
ಸತ್ಯ ಆನಂದದೊಳರೂಪ ತೋರುವುದು.

Thursday, November 30, 2017
Topic(s) of this poem: life,music,nature,philosophy
COMMENTS OF THE POEM
READ THIS POEM IN OTHER LANGUAGES
Close
Error Success