ನೆನ್ಪು Poem by PRAVEEN KUMAR Kannada Poems

ನೆನ್ಪು

ನಿನ್ನೆನ್ಪು ನನ್ನ್ಯೇದೆ ಬಿರಿದ್ಯಾಂಗ,
ಕಣ್ಣೀರು ಮಳೆಯಂಗೆ ಸುರಿದ್ಯಾಂಗ,
ಕಾಲಾನ, ಲೋಕಾನ ಮರೆವಾಂಗ;
ನೆನ್ಪಿನ ಉರಿಯಾಗೆ ನನ್ನನ್ನು ಬಿಟ್ಟು
ಬೂತಾಯ ಎದೆಯಾಗ ನೀ ಸೇರ್ಯೋದೆ;
ಗಾಳೀಲಿ ನನ್ನ ಸುವ್ಯಾಸನೆಯಾಗಿ
ನನ್ಯೆದೆಯೂವೆ, ನೀನ್ಯೇಂಗೆ ಓದೆ?

ನೀನೋದ ಮೇಲೆ ಕುರುಡಾದೆ ನಾನು,
ಬತ್ತೋಯ್ತು ಜೀವಾದ ಸಿು ಅಲ್ಜೇನು;
ಜೊತೆುಲ್ದ ಅಕ್ಯಂತೆ ನಾನೊಂಟಿಯಾದೆ,
ನಿನ್ನ ಸಿು ನೆನ್ಪಲ್ಲಿ ದಿನನೂಕುತಿರುವೆ;
ನಿನ್ನ ದಿನದಲ್ಲಿ, ಅನ್ನಾದ ಅಗುಳಲ್ಲಿ
ತುಪ್ಪಾದ ಊಟಾದ ರುಚಿುತ್ತು, ಚಿನ್ನ,
ಈಗ ತುಪ್ಪವೂ ಬ್ಯಾಡ, ಅನ್ನಾನು ಬ್ಯಾಡ,
ನಿನ್ನ ನೆನ್ಪೊಂದೆ ನನ್ನ ಉಸಿರಾಟ, ಚಿನ್ನ.

ನಿನ್ನೊಂದೊಂದು ಮಾತ್ನಲ್ಲಿ ಮುತ್ಯುರುಳುತಿತ್ತು,
ನಿನ್ನೊಂದೊಂದು ಕಣ್ಣೋಟ ಜುಮ್ಮೆನಿಸುತಿತ್ತು,
ನಿನ್ನ ಮೈಮುಟ್ದ್ರೆ, ನರನಾಡಿ ಕುಣಿದ್ಯಾಡಿ
ಸಂತೋಸ ಮೈಯಲ್ಲಿ ಒಳೆಯಾಗುತ್ತಿತ್ತು;
ಈ ಬಡವ್ನ ಒಡನಾಟ ಕುಯಾಯ್ತೆ ನಿನಗೆ?
ರಸವಿಲ್ದ ನನ್ಜೀವ ಕಸವಾಯ್ತೆ ನಿನಗೆ?
ನಂಗಂತೂ ನೀನಿಲ್ದ ಸಂತೋಸ ಸೂನ್ಯ,
ಈ ಪಟ್ನಾನೂ ಸೂನ್ಯ, ದೇವ್ರೂನೂ ಸೂನ್ಯ
ನಿನ್ನೊಂದೀಗೆ ಸಂತೋಸ ಎಲ್ಲಾನೂ ಓಯ್ತು,
ಮನ್ಸಾರೆ ನಕ್ಕು ವರ್ಸ ವರ್ಸ ಆಯ್ತು.

ಕನ್ನಲ್ಲಿ ಕಟ್ಕೊಂಡ ಕತ್ತಲೆ ಕಪ್ಪು
ಕನ್ನೀರಾಗಿ ಕನ್ನು ಉಕ್ತೈತೆ,
ನಿನ್ನೊಡನಾಟದಾಗೆ ದೇವ್ರನ್ನ ಕಂಡೆ,
ನಿನ್ನನುಟ್ಟಿಸಿದ ದೇವ್ರ ಮೈಮೆ ಆಡ್ಕೊಂಡೆ;
ಗಾಲೀ ಮನ್ನಲ್ಲು ಸಂತೋಸ ಕಂಡೆ,
ಸಂತೋಸ ಬಾಲೆಂದು ಎದೆಯುಬ್ಬಿ ಕೊಂಡೆ:
ಆ ನೆನ್ಪು ಸರಸತಿ ಈನೆ ಆಡಿದ್ಯಾಂಗ,
ಕೋಗಿಲೆ ಕೊರಲೊಡ್ಡಿ ಕೂಗೀದ್ಯಾಂಗ,
ಮಲ್ಲಿಗೆ ಊವು ಅರಲೀದ್ಯಾಂಗ.

Tuesday, July 11, 2017
Topic(s) of this poem: life,love
COMMENTS OF THE POEM
READ THIS POEM IN OTHER LANGUAGES
Close
Error Success