ದ್ಯಾರಿ ತಪ್ಪಿತೇನು? Poem by PRAVEEN KUMAR Kannada Poems

ದ್ಯಾರಿ ತಪ್ಪಿತೇನು?

ಬರ್ತೀನಿಂತ ಒರೊಟೋದೊವ್ಲು
ಮತ್ಯೇಕೆ ನೀನು ಅತ್ರ ಬರ್ಲಿಲ್ಲ?
ಬರ್ತಿ ನೀನೆಂತ ಕಾದುಕಾದು ನಿನ್ಗಾಗಿ
ಅಲ್ವಾರು ವರ್ಸ ಓಡೋದುವಲ್ಲ.

ಬ್ಯಾಗಿಲು ಮೆಟ್ಲಿಗೆ ಸರ್ಸರನೆ ಬಂದು
ಚೆಲ್ವನೀನೆಂದು ನಗ್ಯಾಡಿದ್ದೆ;
ನಾನಚ್ಚರಿಯಿಂದ ನಾಚಿ ನಿಂತಾಗ
ನೀನೇ ನನ್ನವನೆಂದು ಕನ್ನಲ್ಲಂದಿದ್ದೆ.

ನಿನ್ನ ನೆನ್ಪಲಿ ಬ್ಯಾಳು ಬೆಲೀಬೇಕೂಂತ
ನಾನೆಸ್ಟು ಆಸೆ ಪಟ್ಟಿದ್ದೆ ಗೊತ್ತ?
ಬರ್ತೀನೀಂತ ಒರೊಟೋದೊವ್ಲು
ಕನ್ಕಾನಾದ ಊರಿಗೆ ಏಕೋಗಿ ಬಿಟ್ಟಿ?

ಬರ್ತೇನೆಂದವಲು ಬಂದೇ ಬರ್ತಾಲೆಂದು
ವರ್ಸ ವರ್ಸ ನಿನಗ್ಯಾಗಿ ಅಗಲು ರಾತ್ರಿ ಕಾದೆ,
ಉರುಟು ಪರ್ಪಂಚದಲಿ ಎಲ್ಲೋದರೂ ನೀನು
ನನ್ನತ್ರ ಬರ್ತೀಯೆಂದು ಕನ್ನಿಟ್ಟು ಕೂತೆ.

ದ್ಯಾರಿ ತಪ್ಪೀತೇನು, ನನ್ಮರತೆ ಏನು?
ಈ ಮನ್ಸ ಬ್ಯಾಡೆಂದು ದೂರೋದೆ ಏನು?
ನಿನ್ನಲ್ಲಿ ಪರ್ರಾಣ ಇಟ್ಟ ನನ್ಗತಿ ಏನು?
ಎಲ್ಲ ಸೂನ್ಯ ಕಾನ್ತೈತೆ ನೀನಿಲ್ದ ಲೋಕ.

Tuesday, July 11, 2017
Topic(s) of this poem: life,love
COMMENTS OF THE POEM
READ THIS POEM IN OTHER LANGUAGES
Close
Error Success