ಬರುವಳು Poem by PRAVEEN KUMAR Kannada Poems

ಬರುವಳು

ದೂರ ದೂರ ದಿಗಂತದಾಚೆ,
ದೂರದ ಮೂಡಣ ಮೋಡಗಳಾಚೆ
ಬಣ್ಣಬಣ್ಣದ ಕುದುರಯನೇರಿ,
ಕಲ್ಪನೆ ಕನಸಿನ ಏಣಿಯನೇರಿ,
ಪ್ರಾಕ್ತನ ಪ್ರಜ್ವಲ ಚೇತನ ರಾಶಿ,
ಪ್ರಾಂಜಲ ಪ್ರೇಮದ ಪ್ರಾಗ್ರ ಕಾಶಿ
ಸುತ್ತಲ ಕತ್ತಲ ಬಿತ್ತರದಲ್ಲಿ
ಕಾತರ ಆತುರ ಆಶೆಯಚೆಲ್ಲಿ
ಬರುವಳು, ಬರುವಳು ಬೇಗನೆ ಬರುವಳು,
ಕತ್ತಲ ನೆತ್ತಿಯ ಮೆಟ್ಟುತ ಬರುವಳು

ವರ್ತಲ ಕಾಲದ ಪೂರ್ತ ಭ್ರಮಣ
ಹತ್ತಿರ ತಂದಿದೆ, ಆತುರ, ಗಮನ;
ಕಾಲನ ಕೋಶವು ಕವಲಿತ ಗ್ರಹಣ
ಕರಗುತ ತಂದಿದೆ ನೋವಿನ ಶಮನ.

Tuesday, July 11, 2017
Topic(s) of this poem: life,love
COMMENTS OF THE POEM
READ THIS POEM IN OTHER LANGUAGES
Close
Error Success