ಏಕೀ ರೀತಿ ಛೇಡಿಸುವೆ ನನ್ನ? Poem by Praveen Kumar in Bhavana

ಏಕೀ ರೀತಿ ಛೇಡಿಸುವೆ ನನ್ನ?

ಯಾವ ಲೋಕದ, ಯಾವ ಹರವಿನಲ್ಲಿ,
ಮುಗಿಯದೆತ್ತರದಲ್ಲಿ ನಿಂತು,
ಆಗೀಗ ನೆನಪಲಿ ಸುಳಿದು ಬಂದು,
ಕೋಟಿ ಬಣ್ಣದ ಸುಳಿ, ಪ್ರವಾಹ ತಂದು,
ಏಕೀರೀತಿ ಛೇಡಿಸುವೆ ನನ್ನ?

ಉಷೆಯ ಹೊಂಗಿರಣದ, ಸೇತುಕಟ್ಟಿ,
ಹೊಸದಾಶೆ, ಮೆಟ್ಟಿಲುಸಾಲು ಮೆಟ್ಟಿ,
ನಿನ್ನ ಹುಡುಕುತ ಬರಲು ನಾನು,
ನಿನ್ನ ಸ್ವಗತ ಸಂಗೀತ, ನನ್ನ ಮುಟ್ಟಿ,
ದಿಕ್ಕು ಪ್ರಜ್ಞೆಯ ಮರೆತು, ನಾನು,
ಏನೋ ಮಾಡಲೇನೇನೋ ಮಾಡಿ,
ನಿನ್ನ ಕಾಣದೆ, ಮೂಕಗೊಂಡೆ.

ಬ್ರಹ್ಮಾಂಡವ್ಯಾಪಿ, ಕಣ್ಣುಮುಚ್ಚಾಲೆಯಾಡಿ,
ಹೀಗೆನ್ನ ದಣಿಸಿ, ಕುಣಸಿ ನೀನು,
ಅದೆಲ್ಲಿ ನಿಂತು, ನಗುತಲಿರುವೆ?
ಮರೆುಂದ ಕೆಣಕಿ, ನಲಿಸಿ, ರಮಿಸಿ,
ನಾನೆದ್ದು ಬರಲು, ಮತ್ತೆ ಅಡಗಿ,
ಅದಾವ ಕ್ರಿಯೆಗೆ ಸಜ್ಜುಗೊಳುವೆ?
ಅಡಿಯಾಡಿ, ಬಾಡಿ, ದಣದ ಜೀವಕೆ,
ಬೇಕೀಗ ವಿಸ್ಮøತಿ, ವಿಶ್ರಾಂತಿ, ಶಾಂತಿ,
ನಿನ್ನ ಬೆಚ್ಚನೆ ತೋಳಿನಾಸರೆ,
ನಿನ್ನೋಡನೆ ಬೆರೆಯುವ, ಸುಖದ ಪರಕಾಷ್ಠೆ.

Tuesday, July 11, 2017
Topic(s) of this poem: life,love
COMMENTS OF THE POEM
READ THIS POEM IN OTHER LANGUAGES
Close
Error Success