ಸಾವಿರ ಮಿಂಚಿನ ಬೆಳಕು Poem by PRAVEEN KUMAR Kannada Poems

ಸಾವಿರ ಮಿಂಚಿನ ಬೆಳಕು

ಕಣ್ಣಿಂದಳೆದಷ್ಟು, ಮೇಲುಕ್ಕುಕ್ಕಿ ಬರುವ ಮೋಹಕ ರೂಪರಾಶಿ,
ಅವಳು, ಏರಿಳಿತಗಳ ಹದ ತಾಳಮೇಳದ ಸೌಂಧರ್ಯ ಕಾಶಿ;
ಲಕ್ಷ, ಲಕ್ಷ ಕಣ್ಣುಗಳೂ ಕುಡಿಯಲಾಗದ, ಬೆಳಕಿನ ರಮ್ಯ ಬುಗ್ಗೆ,
ನೂರಾರು ಬಣ್ಣ, ಸಾವಿರ ಛಾಯೆಗಳ, ಕಲಸು ಮೇಲೋಗರದ ಲಗ್ಗೆ.

ಅಡಿುಂದ ಹಿಡಿದು, ಮುಡಿವರೆಗೂ, ಅಂದಚಂದದ ಚೆಲ್ಲಾಟ,
ಅವಳಲ್ಲೊಂದೊಂದೂ, ಚೆಲುವುಗಳೊಳಗಿನ ಸ್ಪರ್ಧೆ ಮೇಲಾಟ;
ಅವಳೆದುರಾದಾಗ, ಅದೇನೋ ಉದ್ಧೀಪನೆಯ ಭಾವ ಪ್ರಜ್ಞೆ,
ಸುತ್ತು ಸುತ್ತು ಸುತ್ತಿ, ನನ್ನನವಳಲ್ಲಿ ಹಿಡಿದಿಡುವ ತೃಪûತೆಯ ಸಂಜ್ಞೆ.

ಮಿಣ ಮಿಣ ನಕ್ಷತ್ರಗಳ ಮಿಂಚು, ಸಾವಿರ ಮಿಂಚಿನ ಬೆಳಕು,
ಪೂರ್ಣಚಂದ್ರನ, ಜೇನುಬೆಳಕಿನ, ಮಂದಹೊಳಪಿನ ಸೆಳಕು;
ಚೆಂಡು ವಜ್ರದ, ಕಣ್ಣುಕೋರೈಸುವ ಶುಭ್ರ ಬೆಳಕಿನ ಕೋಲು,
ರಾಶಿ ರಾಶಿ ಸೇರಿ ಮೂಡಿಸಿದ ಬೆಳಕಿನ ಭವ್ಯಲೋಕ ಅವಳು.

ಹಲವು ಹೂವುಗಳ, ಹಲವು ಹಲವು ಸುವಾಸನೆಗಳು ಸೇರಿ,
ಚಂದನ ಕರ್ಪೂರಗಳ ಹಿತಮಿತ ಸೌಗಂಧ, ಆಹ್ಲಾದತೆಯ ಹೀರಿ,
ಚಿಗುರು ವೊಡೆದವಳು ಅವಳು, ಹೊಸ ಹೊಸ ಕನಸುಗಳ ಕಾರಂಜಿ,
ಜೀವದೊಳಗಿನ ಜೀವದಲಿ ಹುದುಗಿ, ಮೈಮನಸ್ಸು ತುಂಬುವವಳು.

ಅವಳು, ಅವರಿವರಂತೆ ಬರೆ ಸಾಮಾನ್ಯಳಲ್ಲ,
ದಿವ್ಯದ್ರವ್ಯ ಗುಣಶಕ್ತಿಗಳ ಮುಕ್ತ ಸಂವೇದನೆಯ ಫಲ;
ಮುಟ್ಟಿದರದೆಲ್ಲಿ ಕಳಂಕ ತಟ್ಟುವುದೋ ಎನ್ನುವ ನಿಷ್ಕಲ್ಮಶತೆ ಅವಳು,
ನಮ್ಮ, ನಿಮ್ಮ ಕ್ಷುಲ್ಲಕತೆಯ ಮೀರಿರುವ ದೈವೀಕತೆಯ ಸೊಬಗು.

ದೇವರಲ್ಲ, ಬರೆಶಕ್ತಿಯಲ್ಲ, ಅವಳು ಮಾನವತೆಯ ಪರಿಪಾಕ,
ನಮ್ಮ ನಿಮ್ಮಂತೆ, ಬಡಿವ ಹೃದಯದ ಮಾರ್ಧವತೆಯ ಪ್ರತಿರೂಪ;
ನಮ್ಮಂತೆ, ಆದರೂ ನಮ್ಮಿಂದ ತುಂಬ, ಬಲುತುಂಬ ಭಿನ್ನ,
ಯಾವುದು ಹೇಗಿರಬೇಕೆನ್ನುವುದರ ಪಾರವಾರ್ಥಿಕ ತತ್ತ್ವ.

Tuesday, July 11, 2017
Topic(s) of this poem: life,love
COMMENTS OF THE POEM
READ THIS POEM IN OTHER LANGUAGES
Close
Error Success