ನಂಟು Poem by PRAVEEN KUMAR Kannada Poems

ನಂಟು

ಕಾಲ ಪಾತಾಳದಲ್ಲಿ,
ದಪ್ಪಪದರುಗಳ ದಿಬ್ಬದಡಿಯಲ್ಲಿ
ಮೈಮರೆತು ನೀನು ಹಾಡುತ್ತಿರುವೆ,
ನನ್ನೆದೆಯ ತಂತಿ ಮಿಡಿಯುತ್ತಿರುವೆ.

ನಿನ್ನ ಸಿಹಿ ಸಂಗೀತ ಲಾಲಿತ್ಯ ಲಹರಿ
ಜಡಕಾಲನಡಿ ಮುಡಿ ಮೀರಿ, ಮೇಲೇರಿ,
ಕಹಿಜೇನು, ಕಣ್ಣೀರ ಬಿಂದುಗಳ ತಂದು,
ನೆನಪಿಸಿದೆ ನಿನ್ನ ನನ್ನನವರತ ನಂಟು.

Tuesday, July 11, 2017
Topic(s) of this poem: life,love
COMMENTS OF THE POEM
READ THIS POEM IN OTHER LANGUAGES
Close
Error Success