ಮೈ ಮರೆತು ಬಾ Poem by PRAVEEN KUMAR Kannada Poems

ಮೈ ಮರೆತು ಬಾ

ನನ್ನ ಭಾವದ್ರಾವಣದಲ್ಲಿ ತೇಲುವ ನವನೀತ ನೀನು,
ನನ್ನಾತ್ಮದಾಳದಲ್ಲಿಳಿದಷ್ಟು ಮೆಲೆ ತೇಲಿ ಬರುವೆ,
ರಕ್ತ ಕಣಕಣದಲಿ ಹಬ್ಬಿ, ಎಲುಬಿನೊಳಗಡೆ ಕೊಬ್ಬಿ,
ನನ್ನ ಸ್ಥಿರಸ್ಥಿರದಲ್ಲೆಲ್ಲ ಭೋರ್ಗರೆದು ನಿಲುವೆ.

ನಮ್ಮ ಭಾಂಧವ್ಯದ ಬೆಂಕಿ ಬುಗಿಲೆದ್ದು ನಿಂತಾಗ,
ನನ್ನಾತ್ಮ, ದೇಹ, ಮನಸು ಕೂಡಿ ದ್ರವಿಸುವುದು;
ಹೃದಯ ಕುಲುಮೆಯ ಮೀರಿ ಪ್ರಸರಿಸುವ ಬೆಳಕಿನಲಿ
ಸತ್ಯ ಶಿವ ಸೌಂಧರ್ಯ ಸುಖರೂಪ ತಾಳುವುದು.

ನಿನ್ನ ಹರೆಯದ ಹರಿತ್ತು ನನ್ನ ಜೀವ ಚೈತನ್ಯ,
ನಿನ್ನೊಲುಮೆಯ ನವಿರು ನನ್ನ ಭಾವ ಸಮುದ್ರ,
ನಿನ್ನ ರೂಪ ಲಾವಣ್ಯ ನನ್ನಾತ್ಮ ಸಂಪತ್ತು,
ನಿನ್ನಸ್ಥಿತ್ವವೆ ನನ್ನಾನಂದದ ಮೂಲಮಂತ್ರ.

ನನ್ನಾತ್ಮ ಸಖಳಾಗಿ ಭಾವಪ್ರವಾಹವನೇರಿ ಬಾ,
ಜೀವ-ಜೀವದ ದಿವ್ಯಮೂರ್ತ ಬಂಧನವಾಗಿ ಬಾ,
ಬಳಲಿ ಬೆಂಡಾದೀ ಜೀವಕ್ಕೆ ಪ್ರೇಮಾಮೃತ ಹೊತ್ತು
ಓ ಚೆಲುವೆ, ನಿನ್ನವನ ಬಳಿ ಮೈಮರೆತು ಬಾ.

Tuesday, July 11, 2017
Topic(s) of this poem: love
COMMENTS OF THE POEM
READ THIS POEM IN OTHER LANGUAGES
Close
Error Success