ದೇವತೆ Poem by PRAVEEN KUMAR Kannada Poems

ದೇವತೆ

ಎಲ್ಲಿರುವೆ, ನೀನೆಲ್ಲಿರುವೆ
ನನ್ನೊಲವಿನ ಓ ದೇವತೆ,
ಯಾವ ಕಾಲದ, ಯಾವ ಲೋಕದ
ದೂರ ನಿನ್ನನು ಹುಡುಕಲಿ,
ಯಾವ ದಿವ್ಯ ತಪಸಿನಿಂದಲಿ
ನಿನ್ನ ಸಾನ್ನಿಧ್ಯ ನಾ ಪಡೆಯಲಿ.

ಎಲ್ಲಿ ನೋಡಿದರಲ್ಲಿ ನೀನು
ನೀರಿನೊಳಗಿನ ಬಿಂಬದಂತೆ
ಮನಸು ತುಂಬ ಫಲನಗೊಳುವೆ,
ಆಶೆ ಕೆದಕಿ, ಮನಸು ಕಲಕಿ
ಬಾಳುವಾಸೆಯ ಮರುಕಳಿಸುವೆ.

Tuesday, July 11, 2017
Topic(s) of this poem: life,love
COMMENTS OF THE POEM
READ THIS POEM IN OTHER LANGUAGES
Close
Error Success