ನನ್ನ ಆಸೆ Poem by Praveen Kumar in Bhavana

ನನ್ನ ಆಸೆ

ರಾಗ ತಾನ ಸೇರುವಂತೆ, ಗಾನ ಗೀತೆ ಬೆರೆಯುವಂತೆ
ನಾನು ನೀನು ಕೂಡಬೇಕು, ಸುಖದ ಹೊನಲು ಹರಿಸಬೇಕು;
ನಾನು ನಿನ್ನ ಮುಖವ ಹಿಡಿದು, ತುಟಿಗೆ ನನ್ನ ತುಟಿಯನಿಟ್ಟು
ನಿನ್ನ ಮಧುರ ಅಧರದಿಂದ ಸಿಹಿಯ ಧಾರೆ ಹೀರಬೇಕು.

ಮೈಯ ಬೆಂಕಿ, ಎದೆಯ ಬಡಿತ ಕೂಡಿ ನಮ್ಮ ಬೆಸೆಯುವಾಗ,
ಉಸಿರಿಗುಸಿರು ನಾವುಯಿಟ್ಟು ಒಂದೆ ಜೀವವಾಗುವಾಗ
ತಡೆಯಲಾಗದಂತ ಆಶೆ ನನ್ನ ಮೈಯ ಸೇರಿ ಬಿಟ್ಟು
ಕೈಯಲ್ಲೇನೋ ಸ್ಫುರಣೆಗೊಂಡು ನಿನ್ನ ತಬ್ಬಿ ಹಿಡಿಯಬೇಕು.

ಕೈಯ ತುಂಬ ನಿನ್ನ ಹಿಡಿದು, ಮತ್ತೆ ಮತ್ತೆ ಎದೆಗೆ ಒತ್ತಿ,
ಎದೆಯ ಬಡಿತ ಚೆಂಡೆಯೊಡನೆ ನಿನ್ನ ಎದೆಯ ಹೊದಿಕೆ ಸರಿಸಿ,
ಕಣ್ಣು ತುಂಬ ನೋಡಿದಾಗ, ನಾಚಿ ನೀ ರಂಗೇರಿದಾಗ,
ನನ್ನ ಬೊಗಸೆ ಕೈಯ ತುಂಬ, ಆಶೆ ಭರಿತ ತುಟಿಯ ತುಂಬ,
ನಿನ್ನ ಮುದ್ದು ಎದೆಯ ತುಂಬ ನನ್ನ ಮುದ್ರೆಯೊತ್ತ ಬೇಕು.

ನನ್ನ ಹಿಡಿತ ಮೀರಿ ಹರಿವ ಆಶೆ ಭೋರ್ಗರೆತದಲ್ಲಿ,
ಸಾಟಿಯಾಗಿ ಉಕ್ಕಿ ಹರಿವ ನಿನ್ನ ಭಾವೋದ್ರೇಕದಲ್ಲಿ
ಕೂಡಿ ನಾವು ಪ್ರೀತಿಯಿಂದ ಅಪ್ಪಿ, ತಬ್ಬಿ, ಉರುಳಿ, ಹೊರಳಿ,
ಲಜ್ಜೆ ಮರೆತು, ಅರಸಿ ಹಿಡಿದು, ಪ್ರೀತಿಯಿಂದ ಲಲ್ಲೆಯಾಡಿ,
ನನ್ನ ನಿನಗೆ, ನಿನ್ನ ನನಗೆ, ಕೊಟ್ಟು ಕೊಟ್ಟು ಸೇರಬೇಕು.

ನಿನ್ನ ನನ್ನ ಕೂಟದಲ್ಲಿ, ನಮ್ಮ ಬಯಕೆಯಾಟದಲ್ಲಿ
ಮೈಯ ತಾಪ ಏರುವಾಗ, ದೇಹ ದೇಹ ಬೆರೆಯುವಾಗ,
ನಿನ್ನ ನನ್ನ ಬಿಟ್ಟು ನಮಗೆ ಬೇರೆ ಯಾವ ಜಗತೆಯಿಲ್ಲ,
ಆಡಿದೆಲ್ಲ ಆತ್ಮಗೀತೆ, ಮಾಡಿದೆಲ್ಲ ಪ್ರೀತಿಯಾರ್ಥ;
ನಿನ್ನ ನನ್ನ ಮಧ್ಯೆ ಆಗ ನಮ್ಮ ಬಿಟ್ಟು ಬೇರೊಂದಿಲ್ಲ,
ನೀನೇ ರಾಣಿ, ನಾನೇ ರಾಜ, ಜಗತೇ ನಮ್ಮ ರಾಜ್ಯವು.

ನಿನ್ನ ದೇಹ ನನ್ನ ರಾಜ್ಯ, ನನ್ನ ದೇಹ ನಿನ್ನ ರಾಜ್ಯ;
ನಮ್ಮ ದಾಹ ತಣಿಸುವಂತ ನಮ್ಮ ದೇಹ ದೇಹದಾಟ
ಒಳಗೆ ಉರಿವ ತಾಪವನ್ನು ತೀರಿಸುವ ಯಜ್ಞ ಪೂಜೆ,
ನಮ್ಮ ಪ್ರೀತಿ ಯಜ್ಞಕ್ಕೆಂದು ನಾವು ಕೊಡುವ ಹವಿರ್ಭಾಗ;
ಬಾರೆ ಪ್ರಿಯ ನನ್ನ ಬಳಿಗೆ, ನಮ್ಮ ಪ್ರೀತಿ ಯಜ್ಞದಲ್ಲಿ
ನನ್ನ ನಿಷ್ಠ ತುಪ್ಪವನ್ನು ಸುರಿದು ದಾಹ ತಣಿಸುವೆ.

Wednesday, July 12, 2017
Topic(s) of this poem: love
COMMENTS OF THE POEM
READ THIS POEM IN OTHER LANGUAGES
Close
Error Success