ನಿನ್ನನ್ನು ಬಿಗಿದಪ್ಪಿ ತುಟಿಗೆ ತುಟಿಯನಿಟ್ಟಾಗ,
ಸಿಹಿ ಬೆಣ್ಣೆಯೋ, ಮಲ್ಲಿಗೆಯ ದಂಡೆಯೋ, ಜೇನುರಸ ಸವಿಯೋ,
ಭಾವೋದ್ವೇಗದ ತೀವ್ರತೆಯಲ್ಲಿ ನಾನು ಹೀರಿ ಹೀರಿ ಸ್ವಾದಿಸಿದೆ;
ನಿನ್ನ ಮೈ ನನ್ನ ಮೈಗಂಟಿ ನಿಂತ ಚಣ
ನಿನ್ನ ಮೈ ಕಾವು ನನ್ನ ಸುತ್ತಿ ಸುತ್ತಿ ಹಿಡಿದು
ಏನೋ ತಿಳಿಯದ ದಾಹ ವಿದ್ಯುತ್ತಾಗಿ ನಾ ಕಂಪಿಸಿದೆ;
ನಿನ್ನೆದೆಯ ತುಂಬು ಹೂವಿನ ಕುಚ್ಚು ನನ್ನೆದೆ ತುಂಬ ಹರಿದಾಗ,
ನಿನ್ನ ನನ್ನೆದೆ ಮಿಡಿತ ಬಡಿತಗಳು ಒಂದಾಗಿ ಮೊರೆದಾಗ
ನಾನೆಲ್ಲ ಮರೆತು ನಿನ್ನ ಮುಖ ತುಂಬ ಚುಂಬಿಸಿದೆ -
ಹೊಳೆವ ಕಣ್ಣಿನ ತುಂಬ, ನಿನ್ನ ಕೆನ್ನೆ, ಗದ್ದ, ಹಣೆ ತುಂಬ,
ಸಂಪಿಗೆ ನಾಸಿಕದ ಪಕ್ಕ ತುದಿ, ತಲೆ ಬಗ್ಗಿಸಿ ಹೆಗ್ಗತ್ತು,
ಮುಖವೆತ್ತಿ ಕತ್ತು ತುಂಬ, ಎಲ್ಲೆಂದರಲ್ಲಿ ತುಟಿ ತುಂಬ
ಹಗ್ಗ ಬಿಚ್ಚಿದ ಗೂಳಿಯ ರೀತಿ ಎಡರಿರದ ಸ್ವೇಚ್ಛಾಚಾರದಲಿ
ತುಟಿಯು ನೋಯುವವರೆಗೆ ನಿನ್ನ ನಾನು ಚುಂಬಿಸಿದೆ;
ಮೇಣದ ಬೊಂಬೆಯ ರೀತಿ ಬಯಸಿದ ಹಾಗೆ ಮೈಕೊಟ್ಟು,
ನಿಮಂತ್ರಣವೆ ಮೈವೆತ್ತ ಕಣ್ಣುಗಳ ಮುಚ್ಚಿಟ್ಟು
ನನ್ನ ಚುಂಬನ ನೀನು ಹೀರಿ ಹೀರಿ ಭುಂಜಿಸಿದೆ.
ಮೇಲುಕ್ಕುವ ವಡಬಾಗ್ನಿಗೆ ಮಿತಿುಕ್ಕುವವರಾರು?
ಸುನಾಮಿಯ ದೈತ್ಯ ತೆರೆಗೆ ತಡೆಯೊಡ್ಡುವವರಾರು?
ಬಯಕೆಯ ದಾಹ ನಮ್ಮಿಬ್ಬರನು ಜೊತೆಯಲ್ಲಿ ಸುಡುವಾಗ,
ದಾಹ ಸಹಿಸದ ನಮ್ಮಧರ ಕೂಡಿ ಸಿಹಿ ಆರ್ದೃದಲಿ ಬೆರೆತಾಗ
ನನ್ನ ನಾಲಗೆ ನಿನ್ನಧರಗಳ ಸೀಳಿ ಸಿಂಧುಗಂಗೆ ಕೂಡಿದುವು,
ಒದ್ದೆ ಚಿಗರೆ ಹರಿಣಿಗಳು ಒಂದರ ಮೇಲೊಂದು ಮೇಲಾಟವಾಡಿದುವು;
ನಿನ್ನೊಳಗೆ ನಾನು, ನನ್ನೊಳಗೆ ನೀನು, ಮೈ ನವಿರೇಳಿಸುವ ಹಿತವು
ನಮ್ಮ ಮೈ ಬೆಂಕಿಯನು ಆಕಾಶಕ್ಕೆ ನೆಗಿಸಿದುವು.
ನನಗೇನೆ ತಿಳಿಯದ ರೀತಿ ನನ್ನ ಕೈ ನಿನ್ನ ಎದೆ ಮೇಲೆ ಹರಿದು,
ಕುಸುಮ ಗೋಪುರಗಳ ಸುತ್ತ ನೊಚ್ಚನೆ ಹರಿದಾಡಿದುವು;
ಸೆಟೆದು ನೀನು ನಿನ್ನೆದೆಯ ನನ್ನ ಕೈಗೆ ಕೊಟ್ಟಾಗ,
ಮದವೇರಿದ ಗಜದಂತೆ ನಾನು ಮುಗಿಬಿದ್ದೆನಲ್ಲಿ -
ಕವಚಗಳ ಬಿಚ್ಚಿ, ಮೇಣ್ ಹರಿದು, ಹಿಡಿದು ಒತ್ತಿ ಮುದ್ದಿಕ್ಕಿ,
ಬಯಕೆಯ ಮದದಲ್ಲಿ ಮೆದುವಾಗಿ ಹೀರಿದೆನು;
ಬಾುತುಂಬ ಇಟ್ಟದನು ಎದೆ ತುಂಬಿ ಚುಂಬಿಸುತ
ಕೆಂಪಡರಿ ಉಬ್ಬರಿಸುವ ಆ ಜಾಜಿಮಲ್ಲಿಗೆ ದಂಡೆ ಮೇಲೆ
ಮನತುಂಬಿ ಮುಖವನ್ನು ಮತ್ತೆ ಮತ್ತೆ ತೀಡಿದೆನು;
ಪ್ರಕ್ಷುಬ್ಧ ದಾಹದ ಹೆಬ್ಬಾವು ನಮ್ಮನ್ನು ಹೆಡಮುರಿ ನುಂಗುತ್ತಿರುವಾಗ,
ದಾಹದ ಪಾರಮ್ಯದಲಿ ನಾವು ಹಿತದ ಚೀತ್ಕಾರದಲಿ ಬೆರೆತು
ಸುಖದ ಪರವಶತೆಯಲ್ಲಿ ಹಿತದ ಬಿಗಿಯಪ್ಪುಗೆಯಲ್ಲಡರಿ
ನೀನು ನಾನು ಉರುಳಾಡಿದೆವು ದಣಿದು ಮೈ ಕೈ ನೋಯುವವರೆಗೆ;
ಮೈ ಮೈ ಮುಟ್ಟಿ, ಕೂಡಿ, ಅಂಟಿ, ಒಂದನ್ನೊಂದು ತೀಡಿ ಹಿಡಿದು,
ತಾಮ್ರ ಬಣ್ಣಕ್ಕೇರಿ, ಬಸಿದು, ಬಿಸಿಯಲ್ಲಿ ಬೆಸೆದಿರುವಾಗ,
ಹುಚ್ಚಾಗಿ ನಾನು ಪುನಃ ನಿನ್ನ ತುಟಿಗಳ ಪುನರರಸುತ್ತಿರುವಾಗ,
ಮೆಲ್ಲನೆ ಕೈಯನಿಳಿಸಿ ಎಲ್ಲ ತೆರೆದುಬಿಟ್ಟೆ;
ತಲ್ಲಣದಿಂದ ನೀನು ಮರುಕಳಿಸುವ ಮೊದಲೇ
ಒಂದೆ ನೇರ ಘನ ಹೊಯಿಲಿನಲಿ ನಾನಲ್ಲಿಳಿಸಿ ಬಿಟ್ಟೆ;
ಮತ್ತೆ ಏರಿಳಿತಗಳ ತೀವ್ರ ಹೊಡೆತಗಳು,
ಮೈ ಕೈ ಬಾಯಿ ತುಂಬ ಹುಚ್ಚುಚ್ಚು ತೀಟೆಗಳು,
ಮಿಂಚು ಗುಡುಗುಗಳು, ಕೊನೆಗೆ ಧೀರ್ಘ ರುದ್ರ ಮಳೆಧಾರೆ,
ಬೆಟ್ಟ ಘಟ್ಟ ಕೊಳ್ಳತುಂಬ ನೆಲೆನಿಂತ ಬಿಳಿ ಹೊನಲು;
ದಾಹ ತೀರಿದ ಮೇಲೆ, ಭಾವೋದ್ವೇಗ ಮಬ್ಬಾದಾಗ,
ಉಚ್ವಾಸ, ಎದೆ ಬಡಿತ, ಬಿಗಿಯಪ್ಪುಗೆ ಸಡಿಲುಗೊಂಡು
ತೃಪ್ತಿಯ ಹೊಳೆಯಲ್ಲಿ ನಾವು ಜೊತೆಯಾಗಿ ತೇಲಿದೆವು;
ಮಲ್ಲಿಗೆಯ ಪ್ರೀತಿಯಲಿ ಒಬ್ಬರೊಬ್ಬರನು ಹಿಡಿದು,
ಮೆದುವಾಗಿ ಮುದ್ದಿಕ್ಕಿ ಜೊತೆಯಾಗಿ ಮಲಗಿದೆವು.
This poem has not been translated into any other language yet.
I would like to translate this poem