ನನ್ನಾಶೆಗಳ ಸಜೀವ ಶಿಲ್ಪ ನೀನು,
ನನ್ನ ಕಾಮನೆಗಳ ಸೌಗಂಧ ನೀನು,
ನನ್ನ ಬಯಕೆಗಳ ಶ್ರೀಗಂಧ ಪುತ್ಥಳಿ;
ನನ್ನೊಳಗಿನ ಮಾಗದ ದಿವ್ಯ ಸ್ವಪ್ನಗಳ
ರತ್ನಖಚಿತ ದಂತದ ಶ್ರೀರೂಪ ನೀನು.
ನಿನ್ನ ಮೈಮಾಟ ನನ್ನಾಶೆಗಳ ಕಾರಂಜಿ,
ಅದರೊಂದೊಂದು ತಿರುವು ಏರಿಳಿತ
ನನ್ನ ಸೆಳೆಯುವ ಸುಂದರ ಸೂಜಿಗಲ್ಲು;
ನಿನ್ನೆಲ್ಲ ಕವಚಗಳ ಸರಿಸಿ, ಮೈದಬ್ಬಿ
ನಿನ್ನಮೃತವನ್ನು ಹೀರುವದಮ್ಯ ಬಯಕೆ.
ನಯವಿನಯಗಳ ಪ್ರೀತಿಸ್ಫೂರ್ತಿ ನೀನು,
ನನ್ನಾಶೆಯ ಹರವು ಬಲ್ಲವಳು ನೀನು;
ನಾ ನಿನ್ನ ಭದ್ರ ಹಿಡಿದು ಚುಂಬಿಸಿದಾಗ
ನನ್ನ ಕೈಯಲ್ಲೆ ಕರಗಿ ನೀರಾಗುವ ನೀನು,
ನನ್ನೊಳಗೆ ಬಯಕೆಯ ಪ್ರವಾಹ ತರುವೆ.
ಮೇಲೇರುವ ಬಯಕೆಯ ಸುನಾಮಿಯಲಿ
ನಿನ್ನೆದೆಯ ಮೇಲಿನ ದ್ವಯ ಮುಕುಟಗಳ
ನಾ ಕೈತುಂಬ ಹಿಡಿದು ಹಿಚುಕಿದ ಹಾಗೆ,
ಹಿತದ ಸಿಹಿ ನೋವಿಂದ ನೀ ಚೀರುವಾಗ,
ನಿನ್ನ ತೆರೆದ ಮೈಯೆಲ್ಲ ಚುಂಬಿಸುವೆ ನಾನು.
ಬಯಕೆಯ ಪೂರದಲಿ ಕೆಂಪಾದ ನಿನ್ನ ದೇಹ,
ಅದರಲ್ಲಿ ನನ್ನನ್ನದ್ದಿ ಸುಖಿಸುವ ನನ್ಮ ದಾಹ;
ಸೈರಣೆಯ ಕಟ್ಟೆಯೊಡೆದು, ನಾನಿನ್ನ ಹಿಡಿದು,
ಮೈಮೈಗಳು ತೀಡಿ ಬೆಂಕಿಯು ಸಿಡಿದಾಗ,
ಜೊತೆಯ ಆ ಸುಖಕೆ ಸ್ವರ್ಗ ಸರಿಸಾಟಿಯುಂಟೆ?
ಮತ್ತೆ ಮತ್ತೆ ಬೇಕೆಂಬ ನಿನ್ನಾ ಬಯಕೆ,
ನಿನಗೆಲ್ಲ ಕೊಡುವ ನನ್ನ ಸಿಹಿ ನಿರ್ಧಾರ -
ನಾವು ಆಡಿದ್ದೆ ಆಟ, ಹೂಡಿದ್ದೆ ಹೂಟ,
ಹದ್ದುಬದ್ದನ್ನೆಲ್ಲ ನೆಗೆದು, ಬೇಲಿಗಳ ಜಿಗಿದು
ನೀನೆನ್ನ, ನಾನಿನ್ನನ್ನನುಭವಿಸಬೇಕು ಚಿನ್ನ.
ನೀನು ನಾನು ಬೆಸೆದೊಂದಾದಾಗ ಮಾತ್ರ
ನಮ್ಮೊಳಗಿನ ಬೆಂಕಿ ನಂದುವುದು ಸಾಧ್ಯ,
ನಾವು ನಾವಾಗುವ ಪರಿಪೂರ್ಣತೆಯು ಸಾಧ್ಯ;
ನಿನ್ನ ಹೊರತು ನಾ ಅಪೂರ್ಣ, ಅಸಂಬದ್ಧ,
ನನ್ನ ಹೊರತು ನೀನು ಅಸಂಗತೆ, ಅತೃಪ್ತೆ.
ನಮ್ಮ ಮೈಬಿಸಿ ಸೇರಿ, ಸಿಹಿ ಬೆಂಕಿಯಾದಾಗ,
ನನ್ನ ಮೈ ಕಾವಲ್ಲಿ ನಿನ್ನ ದೇಹವರಳಿದಾಗ,
ದುಂಬಿಯಾಗಿ ನಾನು ನಿನ್ನೊಳಗೆ ಇಳಿದು,
ಮಕರಂದ ಹೀರಿ, ಪರಾಗಗಳ ಸುರಿಸಿ,
ನಿನ್ನಮೃತ ಚೆಲುವಿಗೆ ರೂಪ ಕೊಡುವೆನು ಪ್ರಿಯೆ.
This poem has not been translated into any other language yet.
I would like to translate this poem