ವಿಧಿಯ ಲಿಖಿತ Poem by PRAVEEN KUMAR Kannada Songs

ವಿಧಿಯ ಲಿಖಿತ

ನಿನ್ನನ್ನು ನನ್ನ ಮುಂದಿಟ್ಟು ವಿಧಿ
ಆಡುತ್ತಿದೆ ಯಾವ ಆಟ?
ಆಶೆಯ ಗಾಳವನಿಕ್ಕಿ ಮುಂದೆ,
ಹೂಡುತ್ತಿದೆ ಯಾವ ಹೂಟ?

ನಾನಾಗಿ ಅರಸಿ ಹೋದುದಲ್ಲ,
ವೈರಾಗಿಯಾಗಿ ಹೋಗುತ್ತಿದ್ದೆ;
ದಾರಿಗಡ್ಡ ನಿಂತು ನಿಲಿಸಿ ನನ್ನ,
ಅಡ್ಡದಾರಿ ಹಿಡಿಸಿತೇಕೆ?

ವಿಧಿಯ ದಿಕ್ಕನ್ನು ಹಿಡಿದು ಹೋದೆ,
ಆದರಿನ್ನು ವಿಧಿಗೆ ತೃಪ್ತಿುಲ್ಲ;
ಬೆಟ್ಟದೆತ್ತರ ಆಶೆಮುಂಂದಿರಿಸಿ,
ಮುಟ್ಟಲು ದಾರಿುಲ್ಲದಂತೆ ಮಾಡಿತಲ್ಲ.

ಚಕ್ರವ್ಯೂಹದಲ್ಲಿ ಸಿಕ್ಕಿಬಿದ್ದು,
ಅಭಿಮನ್ಯುನಾದೆನಲ್ಲ;
ವಿಧಿಯೆ ನಿಧಿಯೆಂದು ನಂಬಿ ಕೂತು
ಕುರುಡುದಾರಿ ಹಿಡಿದೆನಲ್ಲ.

ಇದರಲ್ಲೇನೋ ಇರಬೇಕು ಗುಟ್ಟು,
ಮತಿಗೆ ಮೀರಿದ ವಿಧಿಯ ಪಟ್ಟು;
ಆಡಿಸಿ ಆಡಿಸಿ ಸೋಲಿಸಿ ನನ್ನ
ಕೊಡುವುದೋ ಕೊನೆಗೆ ಬಯಸ್ಲಿದನ್ನ?

ನನ್ನಂತರಾಳದ ಸಂಪತ್ತು
ಇಂದಲ್ಲ ನಾಳೆ ಸಿಕ್ಕಲೇಬೇಕು,
ಅಡ್ಡಿಆತಂಕಗಳೇನೇ ಇರಲಿ,
ನಾನಲ್ಲಿ ತಲಪಲೇಬೇಕು.

ವಿರಾಗದ ದಾರಿಹಿಡಿದು
ಕಣ್ಣಮುಚ್ಚಿ ನಡೆಯುತ್ತಿದ್ದ ನನ್ನ
ನಿನ್ನಕಡೆ ಹೊರಳಿಸಿದ ವಿಧಿಯ ಆಟ
ತೃಪ್ತಕರುಣೆಯ ಸಾಕ್ಶ್ಯವೋ ಏನೋ.
ನಿನ್ನ ನಾನು ತಲಪಿದರೆ ಸಾಕು,
ಹುಡುಕಿ ಹುಡುಕಿ ಬಳಲಿದ ಜೀವಕ್ಕೆ
ಮತ್ತಿನ್ನೇನು ಸೌಭಾಗ್ಯ ಬೇಕು,
ವಿಧಿ ಕೈಹಿಡಿದೆ ಮುನ್ನಡೆಸಬೇಕು.

ಹಿಡಿದ ದಾರಿ ಹೇಗೋುರಲಿ,
ನಗುನಗುತ ನಡೆಯೆ ನಾನು ಸಿದ್ಧ;
ವರುಷವರುಷಗಳೇ ಕಳೆದು ನಿಲಲಿ,
ನಾನಿನ್ನ ಸೇರುವುದು ವಿಧಿಯ ಲಿಖಿತ.

Tuesday, April 26, 2016
Topic(s) of this poem: love
COMMENTS OF THE POEM
READ THIS POEM IN OTHER LANGUAGES
Close
Error Success