ಭಾವವೆಂಬ ಹಾಲಿನಲ್ಲಿ, ತೇಲಿ, ತೇಲಿ, ಬಂದು ನೀನು,
ಹಬ್ಬಿ ತಂದೆ, ಹೃದಯದಲ್ಲಿ ಜಿನುಗುವಂತ ಪ್ರೀತಿ ಜೇನು;
ಯಾವ ದಿಕ್ಕು, ಮೂಲೆುಂದ, ಯಾವಲೌಕಿಕ ಮೋಡವೇರಿ,
ಯಾವ ನೆನೆಪು ದೋಣಿಯೇರಿ, ಯಾವ ಜನ್ಮ ಋಣವ ಹೀರಿ,
ನೀನೆ ನಾನು ಎಂದು ಕೂಗಿ, ಹರಣ ಕರಣದೊಳಗೆ ಬೀಗಿ,
ನನ್ನೊಳಗೆ ಹೀಗೆ ನೀನು, ತುಂಬಿ ತುಂಬಿ ಬೆಸೆದೆಯೊ,
ಕವಿದ ಕತ್ತಲೆ ಬಗೆದು ನಿಂದು, ದಿವ್ಯ ಬಿಳಿ ಬೆಳಕಾದೆಯೊ?
ನಾನು ಎಂಬ ಸ್ಫಟಿಕ ತೂರಿ, ಮತ್ತೆ ಸಪ್ತವರ್ಣವಾಗಿ,
ಸಂಗೀತವಾಗಿ, ಸೌಗಂಧವಾಗಿ, ಮಂದ ಮಾರುತ ಸ್ಫರ್ಷವಾಗಿ,
ನನ್ನ ಜೀವಕ್ಕೊಂದು ದಿವ್ಯ, ಗಂಗ ಸೇಂಚನೆಯಾದೆಯೊ,
ನನ್ನ ಕಲ್ಪನೆಗೊಂದು ಭವ್ಯ, ಪ್ರಫುಲ್ಭ ಖನಿ ನೀನಾದೆಯೊ?
ಹಗಲು ತುಂಬ ಬೆಳಕು ಆಗಿ, ರಾತ್ರಿ ತುಂಬ ನೆನಪು ಆಗಿ,
ಮೈಯ ತಡವಿ, ದಾರಿ ತೋರಿ, ಹಾಡು ಹಾಡಿ, ಹೃದಯ ತೀಡಿ,
ಮುಂದೆ, ಮುಂದೆ ಹೀಗೆ ಎಲ್ಲಿ, ದಟ್ಟ ಪ್ರೀತಿ ಕಡಿವಾಣದಲ್ಲಿ,
ಯಾವ ದಡವ ಸೇರಿಸಲು ಎಂದು, ನನ್ನ ಮುನ್ನಡೆಸುತ್ತಿರುವೆಯೊ?
This poem has not been translated into any other language yet.
I would like to translate this poem