ಭಾವ ಬಂಧನ Poem by PRAVEEN KUMAR Kannada Songs

ಭಾವ ಬಂಧನ

ಇದಾವ ಬಗೆಯ ಭಾವ ಬಂಧನ,
ಇದಾವ ಲೋಕದ ಭಾವ ಸ್ಪಂದನ,
ಇದಾವ ಜನ್ಮದ ಮಮತೆಯ ಹಂದರ,
ಇದಾವ ಮೂಕ ಹೃದಯದ ಸಂಕರ
ಬಳ್ಳಿಯ ಹಾಗೆ ನಮ್ಮನು ಸುತ್ತಿ
ಕಾಲ ಸ್ಥಲದ ಅಂತರ ಮರೆತು
ನಮ್ಮನ್ನೀ ಪರಿ ತಂದಿದೆ ಸನಿಹ?

ದೂರದಲ್ಲೆಲ್ಲೋ ಬದುಕುವ ನಿಮಗೆ
ನನ್ನೀ ಹೃದಯ ತಡಪಡಿಸುವುದಿಲ್ಲಿ,
ನನ್ನೊಲುಮೆಯ ಪ್ರಾಜ್ವಲ ಪ್ರೀತಿಯ ಕಿಡಿಗೆ
ನಿಮ್ಮೊಳಗಿನ ರಾಗ ಉಕ್ಕೇರುವುದಲ್ಲಿ,
ಈ ಮೈಲುಗಳಾಚಿನ ರಾಗ ಮೇಲಾಟ,
ಈ ನದಿ ನೆಲ ಮೇಲಿನ ಭಾವ ಹಾರಾಟ
ಮರೆಸಿದೆ ನಮ್ಮೀ ನೋವಿನ ಅಂತರ.

ನಮ್ಮಿ ಬದುಕಿನ ಪ್ರವಾಹದಲ್ಲಿ
ಈ ಮಧುರ ಬಾಂಧವ್ಯದ ಉಧ್ಬವವೆಲ್ಲಿ?
ನಮ್ಮೀ ಮವ್ಮತೆಯ ಸಮರಸದಲ್ಲಿ
ಈ ಸಂವೇದನೆ ಸರಸದ ಮೂಲವೆಲ್ಲಿ?
ಕಾಣದ ಕೈಯ ಮೋಹಕ ಶಕ್ತಿ
ನನ್ನನು ನಿಮ್ಮಲಿ, ನಿಮ್ಮನು ನನ್ನಲಿ
ಪೋಣಿಸಿುಟ್ಟಿದೆ ಮಾಧುರ್ಯದ ನಂಟು.

ನಿಮ್ಮ ಮನಸಿನ ಹಾಲಿನ ಹೊಳೆಯಲಿ
ಪ್ರವಾಹ ತರುವ ಚೇತನ ನಾನು,
ನನ್ನ ಮನಸಿನ ಕತ್ತಲ ಗುಂಹರದಲ್ಲಿ
ಸಾವಿರ ಸೂರ್ಯರ ಪ್ರಭಾವಳಿ ನೀವು,
ನಮ್ಮೀ ಬಾಂಧವ್ಯದ ಸುಮಧುರ ಭಾವ
ಮೌನ ಪ್ರವಾಹದಿ ಹಬ್ಬುತ ಹರಿದು
ವಿಶ್ವಸೌಂಧರ್ಯದ ಸಾಗರ ಸೇರಲಿ.

Tuesday, April 26, 2016
Topic(s) of this poem: love
COMMENTS OF THE POEM
READ THIS POEM IN OTHER LANGUAGES
Close
Error Success