ಸುಖದ ದಿನ Poem by PRAVEEN KUMAR Kannada Songs

ಸುಖದ ದಿನ

ಹಿಂದೊಂದಿತ್ತು ದಿನ,
ತೃಪ್ತಸುಖ ಸ್ಫುರಣೆಯಿಂದ,
ಹರೆಯ ಹಮ್ಮಿದ ಹೃದಯದಿಂದ
ನಿನ್ನ ನೋಡಿ ನೋಂತ ದಿನ.

ಕಾಲಕಂದರ ಬೆಳೆುತು,
ಭಾವತೀವ್ರತೆ ಸೊರಗಿತು,
ಮನಸ ಮಂಜು ಕಮಿತು;
ಕಾಲದಿಬ್ಬದ ಗುಂಟ ಮೂಡಿತು
ಸುಖದ ದಿನದ ಹೆಜ್ಜೆ ಗುರುತು,
ಹಸುರು ಜೀವದ ಹುಲುಸು ಜೀವನ
ಹೆಜ್ಜೆ ಗುರುತು ದಿಕ್ಕು ಮರೆತು;
ಶಿಲೆಗೆ ಹಬ್ಬಿ ಬೆಳೆದು ಬಂತು;
ಶಿಲೆಯು ಜೀವನವಾುತು,
ಮರಳು ಯೌವನವಾುತು.

ಕಾಲಮಂಡಲ, ಸುತ್ತಿ ಸುತ್ತಿ,
ಮೂಲ ಕೊನೆಗೆ ಸೇರಬೇಕು;
ನಿಯತ ಸ್ಥರದ ವಿಶ್ವನಿಯಮ
ಹಳೆಯ ಹರೆಯ ತರಲೆ ಬೇಕು.

Wednesday, April 27, 2016
Topic(s) of this poem: love
COMMENTS OF THE POEM
READ THIS POEM IN OTHER LANGUAGES
Close
Error Success