ಸಾವಿನ ಭೀತಿ Poem by PRAVEEN KUMAR Kannada Songs

ಸಾವಿನ ಭೀತಿ

ಹಿಂದೊಮ್ಮೆ ಹಿಡಿದಿತ್ತು ಭೀಕರ ಸಾವಿನ ಭೀತಿ,
ಇನ್ನೆಂದೂ ಮತ್ತೆ ಮೇಲೆದ್ದು ಬರಲಾಗದ ರೀತಿ;
ಯೌವನದ ಯವನಿಕ ಮರೆಯಿಂದ ಆತ್ಮ
ಬಡಿದೆದ್ದು ತತ್ತರಿಸಿ ಭೂಮಿ ಹಿಡಿದಿತ್ತು.

ವರ್ಷಗಳ ಚಕ್ರ ನಿರಂತರ ಸುತ್ತಿ
ಹಳೆಕಾಲ ಬಹುದೂರ ಸಾಗಿಹೋಗಿದೆ ಇಂದು;
ಬಂದೆನೆಲ್ಲಿಂದ, ಬಂದೆ ಹೇಗೆಂದು
ತಿರುಗಿದರೆ ದೂರ ಭಾವಪ್ರಪಾತದ ನಡುವೆ
ನಡೆದ ನೆನಪಿನದಾರಿ, ಕಣ್ಣೀರ ಕಪ್ಪಿನ ಹೆಜ್ಜೆ
ಮೂಡಿ ನಿಂತುದ ಕಂಡೆ.

ಕಾಲಚಕ್ರದ ಓಟ ಮುಂದೆ ಸಾಗಿದ ಹಾಗೆ
ಮೃತ್ಯುಲೋಕದ ಗಾಳಿ ಬಳಿ ಸಾರಿ,
ಮತ್ತೆ ಭಾವೈಕ್ಯದ ಧೈರ್ಯ
ತುಂಬುತ್ತಿದೆ ಮೈಮನ, ಹೃದಯ, ಅತ್ಮ.

Wednesday, April 27, 2016
Topic(s) of this poem: love
COMMENTS OF THE POEM
READ THIS POEM IN OTHER LANGUAGES
Close
Error Success