ಸ್ವಪ್ನ ಸುಖ Poem by PRAVEEN KUMAR Kannada Songs

ಸ್ವಪ್ನ ಸುಖ

ಲೋಕಾಲೋಕ ಕಾಲಪ್ರಳಯದಲಿ ಮೈಮರೆತಾಗ
ನಭನಾಭಿಯೊಳಗಿಂದ ಅಭಯ ಸಂದೇಶದ ಜ್ಯೋತಿ
ಮೆಲ್ಲಮೆಲ್ಲನೆ ಹಬ್ಬಿ, ಬಿಗಿದಪ್ಪಿ, ಬೆಳಕಾಗಿ
ವಿಹಂಗಮ ಸ್ವಪ್ನಲೋಕದಲಿ ರಸವಾಗಿ ಮೂಡುವುದು.

ಕಾಲಪರೆಗಳ ಬಿಚ್ಚಿ ನೆನಪಿನ ತಟದಲ್ಲಿ
ಅಂದು ಇಂದಿನ ಮಧ್ಯೆ ಕಾಲಸೇತುವೆ ಕಟ್ಟಿ
ವಿಧಿಯ ಕಂದರ ಮರೆತು, ತೇಲುತ್ತಿದೆ ಕನಸು,
ಕಾಲತೀತತೆ ಮರೆತು ಸುಖಿಸುತ್ತಿದೆ ಮನಸು.

ಭಾವತೀವ್ರತೆ ಸೊರಗಿ ಮನಸು ಬೆಳೆಸಿದ ಮಂಜು,
ಕೊನೆಕಾಣದ ದುಗುಡ ಶೋಧನೆ ನಿರಾಶೆಯ ನಂಜು,
ಆಶೆನಿರಾಶೆಯ ತೊಟ್ಟಿಲಲಿ ಮೈಗೂಡಿದ ನೋವು
ಸ್ವಪ್ನದ ಶುಭಸ್ಫರ್ಶದಲಿ ನೀರಾಗಿ ಕರಗುವುವು.

Wednesday, April 27, 2016
Topic(s) of this poem: love
COMMENTS OF THE POEM
READ THIS POEM IN OTHER LANGUAGES
Close
Error Success