ರಾಣಿಹುಳ Poem by PRAVEEN KUMAR Kannada Songs

ರಾಣಿಹುಳ

ಅವಳು ಬಂದು,
ನೀನೆ ಬೇಕೆಂದು
ಬೇಲಿ ನುಗ್ಗಿ ಧ್ವಂಸ ಮಾಡಿ,
ನನ್ನ ಮುಟ್ಟಿ, ಹೃದಯ ಕುಟ್ಟಿ
ಬೇಕಾದಷ್ಟು ಸ್ವೀಟು ಹೀರುಯೆಂದು
ಬಿಗಿಯ ಉರುಟು ರೂಪ ತೆರೆದು
ಹೊಂಚು ಹಾಕಿ ಕಾದಳು.

ಜೊಲ್ಲು ಸುರಿಸಿ, ಮೇಲೆ ಹಾರಿ
ಜೇನುಗುಡಗೊತ್ತಿ ಒತ್ತಿ
ಮನೆಯ ದೂರದ ಮೂಲೆಯಲ್ಲಿ
ಕೈಯ ತುಂಬ ಜೇನು ಕುಡಿದೆ,
ಜೇನು ಹುಟ್ಟು ಬಗೆದು ಸವಿದು,
ಜೇನು ಅನುಭವ ನಾನು ಪಡೆದು
ಕೈಯ ತುಟಿಗೆ ಒತ್ತಿದೆ.

ಜಿಂಕೆ ಬಲೆಗೆ ಬಿತ್ತು ಎಂದು
ಮನಸಿನಲ್ಲಿ ಜಾಮೂನು ಸವಿದು
ಮುನಿಸು ಮುಖದ ತುಂಬ ತಂದು
ಕಾದು ಅವಳು ಕೂತಳು;
ಕಳ್ಳು ಕುಡಿದ ಮಂಗನಂತೆ,
ಮತ್ತೆ ಮತ್ತೆ ಬೇಕೆಂದೆನಿಸಿ ನಾನು
ಜೇನು ಹುಟ್ಟು ಮತ್ತೆ ಹುಡುಕಿ
ಮುಖವ ಹುಟ್ಟಿಗೆ ತುರುಕಿದೆ.

ನೋಡು, ಜೇನು ಹುಳದ ಹಿಂಡು,
ಒಂದೊಂದು ಬಂದು ಚುಚ್ಚಿದಾಗ,
ವಿಷವು ಒಳಗೆ ಸೇರಿದಾಗ,
ಮುಖವು ಬಾತು ಬೆಂಡಾುತು;
ಉರಿವ ಮುಖವ ಹೊತ್ತು ನಾನು
ಅಲ್ಲಿಂದ ಬೇಗ ಓಟಕಿತ್ತೆ,
ಸ್ವೀಟು ಬೇಡ, ಜೇನು ಬೇಡ,
ಬೆಣ್ಣೆಯನುಭವ ನನಗೆ ಬೇಡ,
ಮುಖವು ಕಡಿತದಿ ಉಳಿಯಲೆಂದು.
ದೂರ ನಿಂತು, ಹಿಂದೆ ತಿರುಗಿ,
ಜೇನುಹುಳಗಳ ಶಪಿಸಿ ಶಪಿಸಿ,
ಒಳಗೆ ಮಾತ್ರ ಆಸೆ ಇರಿಸಿ
ಮತ್ತೆ ಸ್ವೀಟಿಗೆ ಕಾದೆನು;
ರಾಣಿ ಹುಳವು ಬರಲೆ ಇಲ್ಲ,

ಜೇನು ನನಗೆ ತರಲೆ ಇಲ್ಲ,
ದಾರಿ ಕಾದು ಬಳಲಿದೆ;
ಒಮ್ಮೆ ಹಿಂಡು ಬಂತು ನೋಡಿ,
ಮಧ್ಯೆ ಇತ್ತು ರಾಣಿಹುಳವು;
ಕೋಪದಿಂದ ಉರಿದು ಬಿಟ್ಟು,
ಬರಬೇಡಿರೆಂದು ವಿಧಿಸಿದೆ;
ಒಳಗೆ ಇತ್ತು ಇನ್ನೂ ಆಶೆ,
ಬೂದಿ ಮುಚ್ಚಿದ ಕೆಂಡದಂತೆ,
ಯಾರ ಇದು ಸುಡುವುದೆಂದು
ನಾನು ಇಂದೂ ಅರಿಯೆನು.

Wednesday, April 27, 2016
Topic(s) of this poem: love
COMMENTS OF THE POEM
READ THIS POEM IN OTHER LANGUAGES
Close
Error Success