ನನ್ನವಳವಳು, ಆಂತಿಂತವಳಲ್ಲ,
ಮೇಲೇರದ, ಕೆಳಕ್ಕಿಳಿಯದ
ಸ್ಥಿತಪ್ರಜ್ಞಳವಳು;
ನನ್ನವಳವಳು, ಆಂತಿಂತವಳಲ್ಲ,
ತನ್ನತನ ಮೀರಿ ಬೆಳೆದುನಿಂತ
ದಿವ್ಯ ಕರ್ಮಯೋಗಿ.
ತಗ್ಗಿ ಬಗ್ಗಿ ನಡೆವ ವಿನಯ ಸಂಪತ್ತು,
ಯಾರ ಹಾಲಿಗೂ ಹುಳಿ ಹಿಂಡದ
ಪರಿಶುಧ್ಧ ನಂದಾದೀಪ;
ನಗುನಗುತ ವಿಷ ಕುಡಿದು, ಅಮೃತಕರೆವ
ತ್ಯಾಗ ತಾಳ್ಮೆಯ ಸಿಂಧು, ಬಿಂದು,
ಅನೂನ ಶುಭ್ರ ಆಕಾಶಗಂಗೆ.
ಕೃತ್ರಿಮತೆಯ ಲೋಪ ಲೇಶದ ಹೊರಗೆ,
ಆತ್ಮ ದೀಪದ ಜ್ವಲಂತತೆಯ ಒಳಗೆ,
ಅನವರತ ನಡೆಯುವವಳು;
ಪರರನ್ನೆಂದೂ ಕತ್ತೆತ್ತಿ ಕೆಣಕುವವಳಲ್ಲ,
ಯಾರನ್ನೂ ನೋುಸುವವಳಲ್ಲ
ಅವಳು ಕರುಣೆಯ ಬೆಣ್ಣೆ ಮುದ್ದೆ.
ಮಲ್ಲಿಗೆಯ ಮುಗುಳು, ಸ್ವಾದ ಸೌಗಂಧ,
ನನ್ನವÀಳು ಚಂದ್ರಮನ ಪರಿಶುಧ್ಧ ಬೆಳಗು,
ದೈವಿಕತೆಯೆ ಅವಳು;
ಹಿತಮಿತದ ಕಂತೆ, ಸೌಂಧರ್ಯದ ಸಂತೆ,
ನನ್ನಾತ್ಮ ಗುಡಿಯ ದಿವ್ಯ ಬೆಳಕು,
ನನ್ನಸ್ಥಿತ್ವದ ಸ್ಥಿರ ಸ್ಥಿತತ್ವ.
This poem has not been translated into any other language yet.
I would like to translate this poem