ನಿನ್ನ ಪ್ರೀತಿ Poem by PRAVEEN KUMAR Kannada Songs

ನಿನ್ನ ಪ್ರೀತಿ

ನಿನ್ನ ಪ್ರೀತಿಯ ಅಬ್ಬರದ ಉಬ್ಬರದಲ್ಲಿ
ಆಯತಪ್ಪಿ ಎಲ್ಲೆಲ್ಲೋ ತೇಲಿಹೋದ ನಾನು,
ಏರಿಳಿದು, ಬಿದ್ದೆದ್ದು, ಎಳೆತ ಸೆಳೆತದ ಮಧ್ಯೆ
ಪ್ರಿಯಾವರ್ತದ ಸುಳಿಯಲ್ಲಿ ನಿನ್ನ ಸುತ್ತ ಸುತ್ತ
ಗರ್ಭಗುಡಿ ಸುತ್ತಿಡುವ ಆರ್ತ ಭಕ್ತನ ರೀತಿ,
ಧನ ಅಣುಕಣ ಸುತ್ತಿಡುವ ಋಣ ಅಣುಕಣವಾಗಿ
ಸುತ್ತಿ ಸುತ್ತಿ ನಿನ್ನ ಮುತ್ತಿ ರಸಪೂರವೇರಿ ಹೀರಿ
ನಿನ್ನ ಪ್ರಭಾಮಂಡಲದಲ್ಲಿ ಮಿಂದು ತೃಪ್ತಿಗೊಳುವೆ.

ಮಹಾ ಪ್ರವಾಹ, ಭೋರ್ಗರೆತ, ಚಂಡಮಾರುತ ಪ್ರೀತಿ
ಕತ್ತಲಾವರಣವ ಬಗೆದ ರಣರಣ ಸೂರ್ಯನಾಗಿ ಬಂತು;
ಕತ್ತಲೆಗೆ ಒಗ್ಗಿದ್ದ ನಾನು ನಿನ್ನ ಶುಭ್ರ ಬೆಳಕಿನ ಮುಂದೆ
ಶತಸಹಸ್ತ್ರ ಚಿತ್ರವಿಚಿತ್ರ ಕಾಮನಬಿಲ್ಲುಗಳ ಕಂಡು
ಸ್ವರ್ಗವನೆ ಛೀಯೆನುವ ಸುಖಶಾಂತಿ ನಿನ್ನಲ್ಲುಂಡು
ನಿನ್ನ ಪ್ರೀತಿತಪದಲ್ಲಿ ನಿಜಮೋಕ್ಷ ಕಂಡುಕೊಂಡೆ,
ನಿನ್ನ ಧ್ಯಾನಯೋಗದಲಿ ನಮ್ಮ ಬಂಧದಾಳಕ್ಕಿಳಿದು
ನೀನೆ ನಾನು, ನಾನೆ ನೀನು ಎಂಬ ಸತ್ಯ ತಿಳಿದುಕೊಂಡೆ.

ನಿನ್ನ ಪ್ರೀತಿ ಮಹಾಪೂರದಲಿ ಮಿಂದು ಪೂರ ತೊಯ್ದು
ನನ್ನಾತ್ಮ ಪ್ರಖರ ಬೆಳಕಿನಲಿ ಥಳಥಳಿಸುತ್ತಿದೆ ನೋಡು,
ಏನೋ ಹರ್ಷವರ್ಷ, ಕೃತಾರ್ಥ ಭಾವ, ಹುರುಪು, ಶಕ್ತಿ
ಮೈಮನ ಕಣಕಣದಲ್ಲಿ ಸಂಚಲನಗೊಳ್ಳುತ್ತಿದೆ ನೋಡು;
ನನ್ನಳವು ಮೀರಿದ ಧೈರ್ಯ, ಏನೋ ಸಾಧನೆಯಗಮ್ಯ ಛಲ
ನಿನ್ನೊಲವು ಚಿಲುಮೆಯ ಜೊತೆಗೆ ನನ್ನಲ್ಲಿ ಸ್ಫುರಿಸಿ,
ನಾನು ನಾನೆಂಬ ಧೈರ್ಯ ಸತ್ಯ ಛಾಪಿಸಿ ನನ್ನೊಳಗೆ
ಬಾನಿನಡಿಯಲಿ ನನ್ನ ಹೆಜ್ಜೆ ಸ್ಥಿರ ಸ್ಥಾಪಿಸಿದೆ ನೋಡು.

ಜಗ ಜಂಜಾಟದಲಿ ಸಿಕ್ಕಿ ಝರhರ್iರಿತನಾಗಿದ್ದ ನನಗೆ
ಪ್ರೀತಿಯಮೃತವುಣಿಸಿ ನೀನು ಪುನರ್ಜನ್ಮ ಕೊಟ್ಟೆ;
ಏನು ಮಾಯೆಯೋ, ಮಾಟಮಂತ್ರವೊ ತಿಳಿಯದು ನನಗೆ,
ಬಳಲಿ ಕುಗ್ಗಿದ್ದ ನಾನು ಹುರುಪು ಹುಮ್ಮಸ್ಸು ತುಂಬಿ
ಚೈತ್ರ ಚೈತನ್ಯದ ರೀತಿ, ಕೊರಡು ಕೊನರಿ, ಹೂವು ಅರಳಿ,
ಈ ಸ್ಠೃಯಧ್ಬುತದಲ್ಲಿ ನನ್ನದೇಕೈಕ ಪಾತ್ರಿಯಾದೆ;
ನನ್ನ ಬಾಳಿನ ಧಾರೆ, ದಾರಿ, ನಿನ್ನೆಡೆಗೆ ತಿರುಗಿನಿಂತಾಗ
ಗುರಿಮುಟ್ಟಿದ ತೃಪ್ತತೆಯಲ್ಲಿ ಬಹು ಕೃತಾರ್ಥನಾದೆ.

Wednesday, April 27, 2016
Topic(s) of this poem: love
COMMENTS OF THE POEM
READ THIS POEM IN OTHER LANGUAGES
Close
Error Success