ಸಮರ್ಪಣೆ Poem by PRAVEEN KUMAR Kannada Songs

ಸಮರ್ಪಣೆ

ನನ್ನೆದುರು ನಿಂತವಳೆ ಹದನಾಗಿ ಬಗ್ಗಿ
ತನ್ನೆದೆಗಳ ನನ್ನ ಕಣ್ಣೆತ್ತರಕೆ ತಂದು
ಹೊಳಪು ಕಣ್ಣಿಂದ ನನ್ನ ನೋಡಿದಳು;
ಎದೆ ಭಾರಕೆ ಕುಗ್ಗಿದ ಅವಳ ಎದೆ ಕವಚ
ಬಿಚ್ಚಿ ತೋರಿತು ಶುಧ್ಧ ಸ್ಫಟಿಕ ತುಂಬು ಚಂದ್ರ;
ಆ ಮೊಗ್ಗುಮಲ್ಲಿಗೆ ದಂಡೆ ಮನಸಾರೆ ಕಂಡು
ಮೈಮನ ಕಾವೇರಿ ನಾ ಕಡು ಗಲಿಬಿಲಿ ಗೊಂಡು
ಕಣ್ಣೆತ್ತಿದರೆ ಅವಳ ಕಣ್ಣಲ್ಲಿ ಮಿಂಚು ಹೊಳಪು ಕಂಡೆ,
ಆಹ್ವಾನ, ಸಮರ್ಪಣೆಯ ವಿನಯತೆಯ ಕಂಡೆ.

ಅವಳ ಭಾವವನರಿತು, ನಾನವಳ ಬಳಿ ಸರಿದು,
ಅವಳ ಮುಖವೆತ್ತಿ, ಕಣ್ಣಲ್ಲಿ ನನ್ನ ಕಣ್ಣನ್ನಿಟ್ಟು,
ಅವಳಸ್ಖಲಿತ ತುಂಬು ಚೆಲುವನ್ನು ಹೀರಿಕೊಂಡೆ;
ನೆರೆನಾಚಿ ತನ್ನನ್ನೆ ನನಗೆ ನೆರೆ ನೀಡುವುದ ಕಂಡು
ತುಟಿಯಿಂದ ಅವಳ ತುಟಿಯನ್ನು ಮತ್ತೇರಿದವನಂತೆ
ಮತ್ತೆ ಮತ್ತೆ ಒತ್ತಿ ಆ ಹಿತದಲ್ಲಿ ನನ್ನನ್ನೆ ಮರೆತೆ;
ಎದೆ ಮೇಲೆ ಎದೆಯಿಟ್ಟು ತಿದಿಯೊತೊತ್ತುತ್ತಿರುವಾಗ,
ಢಬಢಬವು ಆ ಈ ಕಡೆುಂದ ಒಂದಾಗಿ ನುಡಿವಾಗ
ಮೂಳೆ ಮುರಿವ ತರ ನಾನವಳ ಬಿಗಿದಪ್ಪಿಕೊಂಡೆ.

ಅವಳಾ ಮೈ ಬೆಂಕಿಯಲಿ ಪುಟಗೊಂಡ ನನ್ನ ಮೈ
ನನ್ನಂಕೆಯ ಮೀರಿ ಅವಳ ಮತ್ತೆ ಮತ್ತೆ ಮುದ್ದಿಸಲು,
ಕೂಡಿ ದಹಿಸುವ ಹಿತ ಬೆಂಕಿ ನಮ್ಮಿಬ್ಬರನ್ನಾವರಿಸಿತು;
ಕಾಲಗತಿ ಮರೆತ ನಾವು ಅದ್ವೈತ ಸುಖದಲ್ಲಿ
ನಾನೇ ಅವಳಾಗಿ, ಅವಳೇ ನಾನಾಗಿ ಹುರಿಗೊಂಡು
ಆತ್ಮಾತ್ಮ ಸಂಗಾತದಲಿ ಮೈ ಮೈ ಸೇರಿದೆವು;
ಅದೇ ಪರಮ ಸುಖ, ಸತ್ಯ, ದೈವೀಕತೆಯ ಔನ್ನತ್ಯ;
ನಾವು ಭೂತ ಸಂಪ್ರಾತ ಭವಿಷ್ಯತ್ತು ಮೀರಿದ ಮಿಥುನ ಪಕ್ಷಿ,
ಪ್ರಕೃತಿಯ ಉಧ್ಧೀಪಿತದ್ವೈತ ದಿವ್ಯ ಅಮೃತ ಸ್ಠೃಷ್ಠಿ.

Wednesday, April 27, 2016
Topic(s) of this poem: love
COMMENTS OF THE POEM
READ THIS POEM IN OTHER LANGUAGES
Close
Error Success