ನಂದಾದೀಪ Poem by PRAVEEN KUMAR Kannada Songs

ನಂದಾದೀಪ

ಎದುರಿಲ್ಲದಿದ್ದರೇನು, ಸದಾ ನನ್ನೊಳಗಿರುವಳು ಅವಳು,
ಕೈಗೆಟುಕದಿದ್ದರೇನು, ಮೈಮನ ತುಂಬ ಹಬ್ಬಿರುವಳವಳು;
ಸವಿನುಡಿಯಿಂದ ನನ್ನ ಹೃದಯವನ್ನರಳಿಸದಿದ್ದರೇನು,
ಆತ್ಮ ನಿವೇದನೆಯಿಂದ ನನ್ನೊಳಗೆನೆ ಹುದುಗಿರುವಳವಳು;
ದಿನರಾತ್ರಿ ನೆನಪಿನಲೆಯ ಬೆನ್ನನ್ನೇರಿ ಪ್ರಣಯಚೇಷ್ಟೆಗಳಿಂದ
ನನ್ನೆದೆಯಲ್ಲಿ ಸುಪ್ತ ಸತ್ತ್ವ ಜೀವ ಆಶೆಗಳ ಸೆಳೆತ ತೀಡುವಳು.

ಅವಳಲ್ಲಿದ್ದರೇನು, ಅವಳಿಲ್ಲಿದ್ದರೇನು, ಅವಳೆಲ್ಲಿದ್ದರೇನು,
ಭೌತಿಕ ಮಾನದಲಿ ಜ್ಯೋತಿರ್ವರ್ಷ ದೂರದಲ್ಲಿದ್ದರೇನು,
ಆತ್ಮ ಹೃದಯದ ಬಂಧವು, ಗಾಢ ತಾಳೆಗೊಂಡು ನಿಂತಾಗ,
ಭೌತ ಪದರುಗಳ ದಾಟಿ, ಕ್ಷಣಾರ್ಧದಲಿ ಜೊತೆಗೊಳ್ಳುವುದು,
ಜೀವ ಜೀವಗಳಭೌತಿಕ ವಿಧಿಯಿಂದ ಬೆಸುಗೆಗೊಂಡು
ಮನೋಮಯ ರಾಜಪಥದಲ್ಲಿ ಸಮ್ಟ ಪರಿಸಾಧಿಸುವುದು.

ರಾಗನುರಾಗವು ಭೌತಿಕ ಬತ್ತಿಯ ಮೀರಿ ಬೆಳಗುವ ದೀಪ,
ಮಿತಿಗಳ ಮೀರಿ ಲೋಕ ಬೆಳಗುವಲೌಕಿಕ ಶುಭ್ರ ನಂದಾದೀಪ.

Wednesday, April 27, 2016
Topic(s) of this poem: love
COMMENTS OF THE POEM
READ THIS POEM IN OTHER LANGUAGES
Close
Error Success